Advertisement

ಉದ್ಯೋಗ ಖಾತ್ರಿ ವಾಹಿನಿ ರಥಕ್ಕೆ ಚಾಲನೆ

03:35 PM Feb 21, 2020 | Naveen |

ರಾಯಚೂರು: ನಗರದ ಜಿಪಂ ಕಚೇರಿ ಆವರಣದಲ್ಲಿ ಮಹಾತ್ಮ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕುರಿತು ಕೂಲಿಕಾರರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆರಂಭಿಸಿದ ಉದ್ಯೋಗ ಖಾತ್ರಿ ವಾಹಿನಿ ರಥಕ್ಕೆ ಜಿಪಂ ಸಿಇಒ ಜಿ. ಲಕ್ಷ್ಮೀ ಕಾಂತರೆಡ್ಡಿ ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಳ್ಳಿ ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ನರೇಗಾ ಯೋಜನೆ ಆರಂಭಿಸಿದೆ. ಜನ ಕೆಲಸವಿಲ್ಲದೆ ಗುಳೆ ಹೋಗುವುದನ್ನು ತಪ್ಪಿಸಲು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಉಪಯುಕ್ತ ಕಾರ್ಯಕ್ರಮವಾಗಿದೆ. ಯೋಜನೆಯಡಿ ಪ್ರತಿ ಕುಟುಂಬಕ್ಕೆ 100 ದಿನ ಉದ್ಯೋಗ ನೀಡಲಾಗುವುದು. ಪ್ರಸಕ್ತ ವರ್ಷ ಭೀಕರ ಬರ ಮತ್ತು ನೆರೆ ಉಂಟಾದ ಕಾರಣ 50 ದಿನಗಳನ್ನು ಹೆಚ್ಚುವರಿಯಾಗಿ ಉದ್ಯೋಗ ಒದಗಿಸಲು ಸರ್ಕಾರ ಘೋಷಿಸಿದೆ ಎಂದು ವಿವರಿಸಿದರು.

ಮಹಾತ್ಮ ಗಾಂಧಿ  ನರೇಗಾ ಯೋಜನೆಯಡಿ ಪುರುಷ ಮತ್ತು ಮಹಿಳೆಯರಿಗೆ ಸರಿ ಸಮಾನ ಕೂಲಿ 249 ರೂ. ನೀಡಲಾಗುತ್ತಿದೆ. ಉದ್ಯೋಗ ಖಾತ್ರಿ ವಾಹಿನಿ ಪ್ರಚಾರ ರಥ ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಸಂಚರಿಸಿ ಮಾಹಿತಿ ನೀಡಲಿದೆ. ಕೂಲಿ ಕಾರ್ಮಿಕರು ಬೇರೆಡೆ ವಲಸೆ ಹೋಗದಂತೆ ಜಾಗೃತಿ ಮೂಡಿಸುವ ಉದ್ದೇಶವಾಗಿದೆ ಎಂದು ಹೇಳಿದರು.

ಜಿಪಂ ಉಪ ಕಾರ್ಯದರ್ಶಿ ಮಹ್ಮದ್‌ ಯೂಸೂಫ್‌, ಯೋಜನಾ ನಿರ್ದೇಶಕ ಶರಣಬಸವ ಕೆಸರಟ್ಟಿ, ತಾಪಂ ಇಒ ರಾಮರೆಡ್ಡಿ ಪಾಟೀಲ, ಮಹಾತ್ಮ ಗಾಂ ಧಿ ನರೇಗಾ ಯೋಜನೆ ಸಿಬ್ಬಂದಿ ಡಿಐಇಸಿ ವಿಶ್ವನಾಥ, ಟಿಐಇಸಿ ಧನರಾಜ, ಎನ್‌ ಆರ್‌ಎಲ್‌ಎಮ್‌ ಯೋಜನೆಯ ವಿಜಯಕುಮಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next