Advertisement

ರಾಯಚೂರು: ಐದು ಮಂದಿಗೆ ಕೋವಿಡ್ ಪಾಸಿಟಿವ್‌

12:24 PM Jun 14, 2020 | Naveen |

ರಾಯಚೂರು: ಜಿಲ್ಲೆಯಲ್ಲಿ ಶನಿವಾರ ಮತ್ತೆ ಐದು ಕೋವಿಡ್ ಪಾಸಿಟಿವ್‌ ಪ್ರಕರಣ ದೃಢಪಟ್ಟಿವೆ. ಆ ಮೂಲಕ ಜಿಲ್ಲೆಯಲ್ಲಿ ಈವರೆಗೆ 383 ಪ್ರಕರಣಗಳು ದೃಢಪಟ್ಟಂತಾಗಿದ್ದು, ಗುಣಮುಖರಾದ ಹಿನ್ನೆಲೆಯಲ್ಲಿ 96 ಜನರನ್ನು ಬಿಡುಗಡೆ ಮಾಡಲಾಗಿದ್ದು, ಸದ್ಯ 285 ಪ್ರಕರಣ ಮಾತ್ರ ಸಕ್ರಿಯವಾಗಿವೆ.

Advertisement

ನಗರದ 40 ವರ್ಷದ ಮಹಿಳೆ (ಪಿ-6806) ಸೋಂಕು ತಗುಲಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ದೇವದುರ್ಗ ತಾಲೂಕಿನ ಹುನಮನಾಯಕ ತಾಂಡಾದ 30 ವರ್ಷದ ಮಹಿಳೆ (ಪಿ-6807) ಮಹಾರಾಷ್ಟ್ರದಿಂದ ಬಂದಿದ್ದಾರೆ. ಇದೇ ಗ್ರಾಮದ ಐದು ವರ್ಷದ ಗಂಡು ಮಗುವಿಗೂ (ಪಿ-6808) ಸೋಂಕು ತಗುಲಿದೆ. ತಾಲೂಕಿನ ಮರ್ಚೆಡ್‌ ಗ್ರಾಮದ 60 ವರ್ಷದ ಮಹಿಳೆ (ಪಿ-6809) ಮಹಾರಾಷ್ಟ್ರದಿಂದ ಮರಳಿ ಬಂದಿದ್ದು, ಪಾಸಿಟಿವ್‌ ದೃಢಪಟ್ಟಿದೆ. ಪಿ-2423 ಸಂಪರ್ಕ ಹೊಂದಿದ್ದ ನಗರದ 36 ವರ್ಷದ ಪುರುಷ (ಪಿ-6810) ವ್ಯಕ್ತಿಗೂ ಸೋಂಕು ತಗುಲಿದೆ.

75 ಜನರ ಗಂಟಲು ದ್ರವ ಮಾದರಿಯನ್ನು ಕೋವಿಡ್‌-19 ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಯಾವುದೇ ಪಾಸಿಟಿವ್‌ ಪ್ರಕರಣ ದೃಢಪಟ್ಟಿಲ್ಲ. ಶನಿವಾರ ಜಿಲ್ಲೆಯಿಂದ 115 ಶಂಕಿತರ ಮಾದರಿಗಳನ್ನು ಕೊರೊನಾ ಪರೀಕ್ಷೆ ಗೆಂದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ದೇವದುರ್ಗ ತಾಲೂಕಿನಿಂದ 11, ಲಿಂಗಸುಗೂರು ತಾಲೂಕಿನಿಂದ 39, ಮಾನ್ವಿ ತಾಲೂಕಿನಿಂದ 05, ಸಿಂಧನೂರು ತಾಲೂಕಿನಿಂದ 24 ಮತ್ತು ರಾಯಚೂರು ತಾಲೂಕಿನಿಂದ 36 ವರದಿ ಕಳುಹಿಸಲಾಗಿದೆ.

ಹಿಂದೆ ಕಳುಹಿಸಿದ ವರದಿಗಳಲ್ಲಿ 56 ನೆಗೆಟಿವ್‌ ಬಂದಿವೆ. ಈವರೆಗೆ 18,145 ಮಾದರಿ ಪರೀಕ್ಷೆಗಾಗಿ ಕಳುಹಿಸಿದ್ದು, ಈ ಪೈಕಿ 16,349 ವರದಿ ನೆಗೆಟಿವ್‌ ಬಂದಿವೆ. ಇನ್ನೂ 1,407 ಮಾದರಿಗಳ ವರದಿ ಬರಬೇಕಿದೆ. ಫೀವರ್‌ ಕ್ಲಿನಿಕ್‌ಗಳಲ್ಲಿ ಶನಿವಾರ 356 ಜನರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ. ಪಾಸಿಟಿವ್‌ ಬಂದ ಕಾರಣಕ್ಕೆ ಐವರನ್ನು ಆಸ್ಪತ್ರೆಗೆ ದಾಖಲಿಸಿದರೆ, 16 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಡಿಸಿ ಆರ್‌.ವೆಂಕಟೇಶ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next