Advertisement

ಬಾಲಕಾರ್ಮಿಕ ಶಾಲೆ ಸ್ಥಿತಿ ವರದಿ ನೀಡಿ

05:23 PM Dec 27, 2019 | Naveen |

ರಾಯಚೂರು: ಜಿಲ್ಲೆಯ ಬಾಲ ಕಾರ್ಮಿಕ ಶಾಲೆಗಳ ಪರಿಸ್ಥಿತಿ ಹಾಗೂ ಅಲ್ಲಿನ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ ಒಂದು ವಾರದೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಬಾಲ ಕಾರ್ಮಿಕ ಶಾಲೆಗಳ ನಿರ್ವಹಣೆಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದು,
ಸರಿಯಾಗಿ ಬಳಕೆಯಾಗಬೇಕು. ಅಲ್ಲಿನ ಸೌಲಭ್ಯ, ವಾಸ್ತವ ಸ್ಥಿತಿಗತಿ ಪರಿಶೀಲಿಸಬೇಕು. ಬಾಲ ಕಾರ್ಮಿಕರ ಪತ್ತೆಗೆ ಹಲವು ಯೋಜಿತ ದಾಳಿ ಮಾಡಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಕರು ಸರಿಯಾಗಿ ಗುರುತಿಸಬೇಕು. ಗುಳೆ ಹೋಗುವುದನ್ನು ತಪ್ಪಿಸಬೇಕು. ಮುಖ್ಯವಾಹಿನಿಗೆ ಬಂದ ಮಕ್ಕಳನ್ನು ಭೇಟಿ ಮಾಡಿ ವರದಿ ನೀಡಬೇಕು ಎಂದರು.

ಬಾಲ ಕಾರ್ಮಿಕ ಯೋಜನಾಧಿಕಾರಿ ಮಂಜುನಾಥ ರೆಡ್ಡಿ ಮಾತನಾಡಿ, ಬಾಲ ಕಾರ್ಮಿಕ ತರಬೇತಿ ಕೇಂದ್ರದಲ್ಲಿ 341
ಮಕ್ಕಳಿಗೆ ಪುನರ್ವಸತಿ ಕಲ್ಪಿಸಿದ್ದು, 2018-19ನೇ ಸಾಲಿಗೆ 364 ಮಕ್ಕಳನ್ನು ಬಾಲಕಾರ್ಮಿಕ ತರಬೇತಿ ಕೇಂದ್ರದಿಂದ ಶಿಕ್ಷಣ ಪೂರೈಸಿ ಮುಖ್ಯವಾಹಿನಿಗೆ ಸೇರಿಸಲಾಗಿದೆ ಎಂದರು.

ಬಾಲಕಾರ್ಮಿಕ ತರಬೇತಿ ಕೇಂದ್ರದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಮಪರ್ಕಕವಾಗಿ ಪೂರೈಸಬೇಕು. ಪೌಷ್ಟಿಕ ಆಹಾರ ಒದಗಿಸಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ 2019-20ನೇ ಸಾಲಿಗೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಸಮೀಕ್ಷೆ ಕೈಗೊಂಡಿದ್ದು, ಜಿಲ್ಲಾದ್ಯಂತ ಈ ಸಮೀಕ್ಷೆ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ ಎಂದರು.

ತಪ್ಪಿತಸ್ಥರು ಯಾರೇ ಆಗಿರಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಾಲೂಕು ಮಟ್ಟದಲ್ಲಿ ರಚಿಸುವ ಟಾಸ್ಕ್ ಫೋರ್ಸ್‌ ತಂಡಗಳಿಗೆ ಗುರಿ ನೀಡಿ, ಕಾಲಕಾಲಕ್ಕೆ ದಾಳಿ ನಡೆಸಿ, ಮೊಕದ್ದಮೆ ಹೂಡಬೇಕು. ಪ್ರತಿ ತಿಂಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲೂಕು ಮಟ್ಟದ ವೈದ್ಯಾ ಧಿಕಾರಿಗಳು ತಮ್ಮ ವ್ಯಾಪ್ತಿಯ ಬಾಲಕಾರ್ಮಿಕ ತರಬೇತಿ ಕೇಂದ್ರದ ಮಕ್ಕಳಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಿ ಅದನ್ನು ದಾಖಲೆಗಳಲ್ಲಿ ನಮೂದಿಸಬೇಕು ಎಂದು ಸೂಚಿಸಿದರು.

Advertisement

ಎಸ್‌ಪಿ ಡಾ| ಸಿ.ಬಿ.ವೇದಮೂರ್ತಿ, ಜಿಪಂ ಉಪಕಾರ್ಯದರ್ಶಿ ಮಹ್ಮದ್‌ ಯೂಸೂಫ್‌ ಖಾನ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಇರ್ಫಾನ್‌, ಡಿಡಿಪಿಐ ಎಚ್‌ .ಬಿ.ಗೋನಾಳ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಬ್ರಹ್ಮಣ್ಯ, ಎಇಇ ಹನುಮಂತರಾಯ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next