Advertisement

ಶಾಲಾ ಮಕ್ಕಳೊಂದಿಗೆ ಸಿಎಂ ಭೋಜನ

04:58 PM Jun 28, 2019 | Naveen |

ರಾಯಚೂರು: ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಬಳಿಕ ಕರೇಗುಡ್ಡ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳೊಂದಿಗೆ ಸಿಎಂ ಕುಮಾರಸ್ವಾಮಿ ಊಟ ಸವಿದರು.

Advertisement

ಸರಳವಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ಚಪಾತಿ, ಹಿರೇಕಾಯಿ ಪಲ್ಯ, ಪುಂಡಿಪಲ್ಯ, ಅನ್ನ, ಸಾರು, ಚಿತ್ರಾನ್ನ, ಮೊಸರು, ಪುಡಿ ಚಟ್ನಿ ಊಟ ಮಾಡಿದರು. ಸಚಿವರಾದ ಸಾರಾ ಮಹೇಶ, ವೆಂಕಟರಾವ್‌ ನಾಡಗೌಡ, ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ದದ್ದಲ್ ಬಸನಗೌಡ, ಜಿಲ್ಲಾಧಿಕಾರಿ ಶರತ್‌, ಸಿಇಒ ನಲಿನ್‌ ಅತುಲ್ ಸೇರಿ ಅನೇಕರು ಪಾಲ್ಗೊಂಡಿದ್ದರು.

ಕಾದು ಸುಸ್ತಾದ ಮಕ್ಕಳು: ಇಲ್ಲೂ ಕೂಡ ಸಿಎಂಗಾಗಿ ಐವರು ಮಕ್ಕಳು ಕಾದು ಕಾದು ಸುಸ್ತಾದರು. ರಾತ್ರಿ ಊಟವನ್ನು ಮಕ್ಕಳ ಜತೆ ಮಾಡಬೇಕು ಎಂಬ ವಾಡಿಕೆ ಹಾಕಿಕೊಂಡಿರುವ ಅಧಿಕಾರಿಗಳು, ಇಲ್ಲಿಯೂ ಮಕ್ಕಳನ್ನು ಸಿದ್ಧಗೊಳಿಸಿದ್ದರು. ಶಾಲಾ ಸಮವಸ್ತ್ರದಲ್ಲೇ ಮಕ್ಕಳು ಕಾದು ಕುಳಿತಿದ್ದರು. ಆದರೆ, ಸಿಎಂ ಬರುವುದು ಮಧ್ಯರಾತ್ರಿ 12 ಗಂಟೆ ಆಗಿತ್ತು. ಅಲ್ಲಿವರೆಗೂ ಮಕ್ಕಳು ಊಟವಿಲ್ಲದೇ ಕಾದು ಕುಳಿತಿದ್ದರು. ಸಿಎಂ ಜತೆ ಊಟ ಮಾಡಿದ್ದಕ್ಕೆ ಹೇಗನ್ನಿಸಿತು ಎಂದು ಮಕ್ಕಳನ್ನು ಕೇಳಿದರೆ, ತುಂಬಾ ಖುಷಿಯಾಯಿತು. ಆದರೆ, ಅವರು ನಮ್ಮನ್ನು ಮಾತನಾಡಿಸಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಿತ್ಯ 8 ಗಂಟೆಗೆ ಊಟ ಮಾಡುತ್ತಿದ್ದೆವು ಇಂದು 12 ಗಂಟೆಯಾಗಿದೆ ಎಂದರು. ಆದರೆ, ಅಷ್ಟೊಂದು ತಡವಾದರೆ ಮಕ್ಕಳನ್ನು ಏಕೆ ಕಾಯಿಸಬೇಕಿತ್ತು. ಮಕ್ಕಳ ಜತೆಗೆ ಊಟ ಮಾಡಬೇಕು ಎಂದು ನಿಯಮವೇನಾದರೂ ಇದೆಯಾ ಎಂದು ಸಾರ್ವಜನಿಕರು ಗೊಣಗಿದ್ದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next