Advertisement

ಕೃಷಿಯಲ್ಲಿ ತಾಂತ್ರಿಕತೆ ಅನಿವಾರ್ಯ

06:10 PM Feb 19, 2020 | Naveen |

ರಾಯಚೂರು: ಕೃಷಿ ಕ್ಷೇತ್ರದಲ್ಲೂ ಸಾಕಷ್ಟು ಸವಾಲುಗಳು ಎದುರಾಗುತ್ತಿವೆ. ರೈತರು ಪರಿಸ್ಥಿತಿ ಅನುಗುಣವಾಗಿ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ| ಕೆ.ಎನ್‌. ಕಟ್ಟಿಮನಿ ಹೇಳಿದರು.

Advertisement

ನಗರದ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಅಖೀಲ ಭಾರತ ಸಮನ್ವಿತ ಸಂಶೋಧನೆ ಯೋಜನೆಗಳಾದ ಕೃಷಿ ಯಂತ್ರೋಪಕರಣ, ಕೊಯ್ಲೋತ್ತರ ತಂತ್ರಜ್ಞಾನ, ಪ್ರಾಣಿ ಶಕ್ತಿ, ಕೃಷಿ ಮತ್ತು ಕೃಷಿ ಆಧಾರಿತ ಕೈಗಾರಿಕೆಯಲ್ಲಿ ಶಕ್ತಿ ಮತ್ತು ಕೃಷಿಯಲ್ಲಿ ಪ್ಲಾಸ್ಟಿಕ್‌ ಬಳಕೆ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಕೃಷಿ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಮಿತ ನೀರು ಬಳಸಿ ಅಧಿಕ ಇಳುವರಿ ಪಡೆಯುವ ನಿಟ್ಟಿನಲ್ಲಿ ಕೃಷಿ ಮಾಡಬೇಕಿರುವುದು ಇಂದಿನ ಸವಾಲಾಗಿದೆ. ರೈತರು ಕೃಷಿ ಜತೆಗೆ ಕೃಷಿಯೇತರ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಸಮಗ್ರ ಕೃಷಿ ಪದ್ಧತಿ ಅನುಸರಿಸುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಕೃಷಿಯೊಂದಿಗೆ ಹೈನುಗಾರಿಕೆ, ಮೀನು, ಹಂದಿ ಸಾಕಣೆ ಮಾಡಬೇಕು. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಕೃಷಿ ಆರಂಭವಾಯಿತು. ಹಂತ ಹಂತವಾಗಿ ಕೃಷಿಯಲ್ಲಿ ಮಹತ್ತರವಾದ ಬದಲಾವಣೆ ಕಂಡು ಬರುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಪ್ರಮಾಣ ಕಡಿಮೆ ಇದೆ. ಈ ನಿಟ್ಟಿನಲ್ಲಿ ರೈತರು ತೋಟಗಾರಿಕೆಗೆ ಬೆಳೆಗೆ ಹೆಚ್ಚು ಒತ್ತು ನೀಡಬೇಕು. ಇದರಿಂದ ಉತ್ತಮ ಆದಾಯ ಪಡೆಯಲು ಸಾಧ್ಯ ಎಂದು ಹೇಳಿದರು.

ರೈತರು ಕೃಷಿ ವಿಶ್ವ ವಿದ್ಯಾಲಯಗಳಿಗೆ ಭೇಟಿ ನೀಡಬೇಕು. ಅಲ್ಲಿನ ಅಧಿಕಾರಿಗಳು ಸಂಶೋಧಕರಿಂದ ನೂತನ ಸಂಶೋಧನೆಗಳ ಬಗ್ಗೆ, ಯಂತ್ರೋಪಕರಣಗಳ ಮಾಹಿತಿ ಪಡೆದು ಸಲಹೆ ಸೂಚನೆ ಪಡೆಯಬೇಕು. ವಿವಿಧ ಇಲಾಖೆಗಳು ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ನೀಡುತ್ತಿವೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿವಿ ಡೀನ್‌ ಡಾ|ಎಂ.ವೀರನಗೌಡ ಮಾತನಾಡಿ, ಈ ಭಾಗದ ರೈತರು ಹೊಸ ಸಂಶೋಧನೆಗಳಿಗೆ ಒಗ್ಗಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಅದೇ ರೀತಿ ವಿಶ್ವವಿದ್ಯಾಲಯದಲ್ಲಿ ಕೃಷಿಗಾಗಿ ಸಣ್ಣ ಹಾಗೂ ಬೃಹತ್‌ ಕೃಷಿ ಯಂತ್ರೋಪಕರಣಗಳನ್ನು ಅಭಿವೃದ್ದಿ ಪಡಿಸಲಾಗುತ್ತಿದೆ ಎಂದು ಹೇಳಿದರು.

ಕೃಷಿ ತಾಂತ್ರಿಕ ಕಾಲೇಜಿನ ಮುಖ್ಯಸ್ಥ ಡಾ| ಕೆ.ವಿ. ಪ್ರಕಾಶ ಪ್ರಸ್ತಾವಿಕವಾಗಿ ಮಾತನಾಡಿದರು. ಜಂಟಿ ಕೃಷಿ ನಿರ್ದೇಶಕ ಡಾ| ಅಬಿದ್‌ ಎಸ್‌.ಎಸ್‌., ಜಿಲ್ಲೆಯ ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯರಾದ ಅಮರೇಶ ಬಲ್ಲಿದವ, ಸಿದ್ದಪ್ಪ ಭಂಡಾರಿ, ವೀರನಗೌಡ
ಪರಸರೆಡ್ಡಿ, ತ್ರೀವಿಕ್ರಮ ಜೋಷಿ, ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದ ಸಂಶೋಧನ ನಿರ್ದೇಶಕರಾದ ಡಾ| ಬಿ.ಕೆ. ದೇಸಾಯಿ, ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ
ನಿರ್ದೇಶಕ ಡಾ| ಬಿ.ಎಂ.ಚಿತ್ತಾಪುರ, ಸಹ ಸಂಶೋಧನಾ ನಿರ್ದೇಶಕ ಡಾ| ಸತ್ಯನಾರಾಯಣರಾವ್‌, ಕಾರ್ಯಕ್ರಮದ ಸಂಯೋಜಕ ಡಾ| ಜಿ.ಎಸ್‌. ಯೆಡಹಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next