Advertisement

ಕೋವಿಡ್ ವೈರಸ್‌ ಪರೀಕ್ಷೆಗೆ 2ನೇ ಮೊಬೈಲ್‌ ಘಟಕ ಸಿದ್ಧ

04:17 PM May 14, 2020 | Naveen |

ರಾಯಚೂರು: ಕೋವಿಡ್ ವೈರಸ್‌ ಶಂಕಿತರ ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ಎರಡನೇ ಮೊಬೈಲ್‌ ಫೀವರ್‌ ಕ್ಲೀನಿಕ್‌ ವಾಹನ ಸಿದ್ಧಗೊಂಡಿದ್ದು, ಬುಧವಾರ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಪರಿಶೀಲಿಸಿದರು. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕ್ಯಾಷುಟೆಕ್‌ ಸಂಸ್ಥೆ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆ ರಾಯಚೂರು ವಿಭಾಗದಿಂದ ಈ ಮೊಬೈಲ್‌ ಕ್ಲಿನಿಕ್‌ ಸಿದ್ಧಪಡಿಸಲಾಗಿದೆ. ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಅಥವ ಕೋವಿಡ್‌-19ನ ಶಂಕೆ ಕಂಡುಬಂದರೆ ಸಾರ್ವಜನಿಕರು ಸಂಚಾರಿ ಘಟಕದಲ್ಲಿ ಮಾದರಿ ನೀಡಿ ಫಲಿತಾಂಶ ಪಡೆಯಬಹುದಾಗಿದೆ.

Advertisement

ಮೊದಲನೇ ಮೊಬೈಲ್‌ ಘಟಕ ರಾಯಚೂರು ತಾಲೂಕಿನಲ್ಲಿ ವಿವಿಧೆಡೆ ಸಂಚರಿಸುತ್ತಿದೆ. 2ನೇ ಘಟಕ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಲಿದೆ. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟೇಶಕುಮಾರ, ಹ್ಯಾಂಡ್‌ ಸ್ಯಾನಿಟೈಸರ್‌, ತೊಟ್ಟಿಯ ನೀರು ಸಂಗ್ರಹಣ ಸಾಮರ್ಥ್ಯ, ಸ್ಯಾಂಪಲ್‌ ಪಡೆಯುವ ಘಟಕ, ವೈದ್ಯರ ಘಟಕಗಳು ಉತ್ತಮವಾಗಿದ್ದು, ಸ್ಯಾಂಪಲ್‌ ಘಟಕದಲ್ಲಿರುವ ಹ್ಯಾಂಡ್‌ಗ್ಲೌಸ್‌ಗಳು ಶಂಕಿತರ ಸ್ಯಾಂಪಲ್‌ ಸಂಗ್ರಹಕ್ಕೆ ಮತ್ತಷ್ಟು ಆರಾಮದಾಯಕವಾಗಿ ಅಳವಡಿಸುವಂತೆ ಸಂಬಂಧಿಸಿದವರಿಗೆ ನಿರ್ದೇಶನ ನೀಡಿದರು. ಇವು ವಿವಿಧೆಡೆ ನಿರ್ಮಿಸಿರುವ ಕ್ವಾರಂಟೈನ್‌ ಕೇಂದ್ರಗಳಿಗೆ ತೆರಳಿ ಅಲ್ಲಿಯೇ ಸ್ಯಾಂಪಲ್‌ ಸಂಗ್ರಹಿಸಬೇಕು. ಕ್ವಾರಂಟೈನ್‌ನಲ್ಲಿ ಇರುವವರನ್ನು ಆಸ್ಪತ್ರೆಗೆ ಕರೆ ತರುವ ತಾಪತ್ರಯ ತಪ್ಪಲಿದೆ.

ಹೊರಗಿನಿಂದಲೇ ರೋಗಿಗಳನ್ನು ಪರೀಕ್ಷಿಸುವಂತಹ ವ್ಯವಸ್ಥೆ ರೂಪಿಸಬೇಕು. ಈ ರೀತಿಯ ನಾಲ್ಕು ಮೊಬೈಲ್‌ ಘಟಕ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾ ಧಿಕಾರಿ ವೆಂಕಟೇಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ| ನಾಗರಾಜ, ಕ್ಯಾಷುಟೆಕ್‌ನ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸಪ್ಪ ಪಟ್ಟೇದ, ಸಾರಿಗೆ ಸಂಸ್ಥೆ ವಿಭಾಗೀಯ ತಾಂತ್ರಿಕ ಅಭಿಯಂತರರ ನಾರಾಯಣ ಗೌಡಗೇರಿ, ವಿಭಾಗೀಯ ಸಂಚಾರಿ ಅಧಿಕಾರಿ ಜಿ.ಆರ್‌. ಜಾಧವ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next