Advertisement

ರಾಯಚೂರು: ಒಂದು ಗಂಟೆ ತಡವಾಗಿ ಆರಂಭವಾದ ಟಿಇಟಿ

01:11 AM May 27, 2019 | Team Udayavani |

ರಾಯಚೂರು: ರಾಜ್ಯಾದ್ಯಂತ ಪ್ರಾಥಮಿಕ ಶಿಕ್ಷಕರ ಅರ್ಹತಾ ಪರೀಕ್ಷೆಗಳು ಶನಿವಾರದಿಂದ ನಡೆಯುತ್ತಿದ್ದು, ಅಧಿಕಾರಿಗಳ ಯಡವಟ್ಟಿನಿಂದ ಭಾನುವಾರ ನಗರದಲ್ಲಿ ಒಂದು ಗಂಟೆ ತಡವಾಗಿ ಪರೀಕ್ಷೆ ನಡೆದಿದೆ.

Advertisement

ನಗರದ ಕೆಇಬಿ ಕಾಲೋನಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ 10 ಗಂಟೆಗೆ ಮೊದಲ ಪೇಪರ್‌ನ ಪರೀಕ್ಷೆ ನಡೆಯಿತು. ಎರಡನೇ ಪತ್ರಿಕೆಗೆ ಪ್ರಶ್ನೆಪತ್ರಿಕೆ ಜತೆಗೆ ನೀಡಿದ ಬುಕ್‌ಲೆಟ್ ಸಂಖ್ಯೆಗೂ ವಿದ್ಯಾರ್ಥಿಗಳ ಅನುಕ್ರಮ ಸಂಖ್ಯೆಗೂ ಹೊಂದಾಣಿಕೆ ಆಗಿಲ್ಲ. ಇದರಿಂದ ಗೊಂದಲವಾಗಿ ಪರೀಕ್ಷಾರ್ಥಿಗಳು ಮೇಲ್ವಿಚಾರಕರ ಗಮನಕ್ಕೆ ತಂದಾಗ ಪುನಃ ಎಲ್ಲರಿಂದ ಓಎಂಆರ್‌ ಮತ್ತು ಬುಕ್‌ಲೆಟ್ ಹಿಂಪಡೆದು ಜೋಡಿಸಿ ವಿತರಣೆ ಮಾಡುವಷ್ಟರಲ್ಲಿ ಒಂದು ಗಂಟೆ ತಡವಾಯಿತು.

ಇದರಿಂದ 10 ಗಂಟೆಗೆ ನಡೆಯಬೇಕಿದ್ದ ಪರೀಕ್ಷೆ ಒಂದು ಗಂಟೆ ತಡವಾಗಿ ಅಂದರೆ, 11 ಗಂಟೆಗೆ ಆರಂಭವಾಯಿತು. ಪರೀಕ್ಷಾ ಕೇಂದ್ರದ ಸಿಬ್ಬಂದಿ ಮಾಡಿದ ಯಡವಟ್ಟಿನಿಂದ ಅಭ್ಯರ್ಥಿಗಳು ಗೊಂದಲದಲ್ಲಿಯೇ ಪರೀಕ್ಷೆ ಎದುರಿಸು ವಂತಾಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿಡಿಪಿಐ ಬಿ.ಕೆ.ನಂದನೂರು, ಪ್ರಶ್ನೆಪತ್ರಿಕೆ ಬಂಡಲ್ ಬದಲಾಗಿದ್ದು, ಈಗ ಸರಿಪಡಿಸಲಾಗಿದೆ. ಪರೀಕ್ಷಾರ್ಥಿಗಳಿಗೆ ಒಂದು ಗಂಟೆ ಹೆಚ್ಚುವರಿ ಅವಧಿ ನೀಡಲಾಗಿದೆ ಎಂದರು.

ಆದರೆ, ಈ ಪರೀಕ್ಷೆ ಮುಗಿದದ್ದು ಮಧ್ಯಾಹ್ನ 2 ಗಂಟೆಗೆ. ಬಳಿಕ, ಮಧ್ಯಾಹ್ನದ ಪತ್ರಿಕೆಯ ಪರೀಕ್ಷೆಯನ್ನು 2.30ಕ್ಕೆ ಆರಂಭಿಸುವುದಾಗಿ ಮೇಲ್ವಿಚಾರಕರು ತಿಳಿಸಿದ್ದರಿಂದ ವಿದ್ಯಾರ್ಥಿಗಳು ಮಧ್ಯಾಹ್ನದ ಊಟಕ್ಕೂ ತೆರಳದೆ ಪರೀಕ್ಷೆ ಎದುರಿಸುವಂತಾಯಿತು. ಜಿಲ್ಲೆಯಲ್ಲಿ 13 ಪರೀಕ್ಷಾ ಕೇಂದ್ರಗಳಿದ್ದು, 2,742 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಅದರಲ್ಲಿ ಕೆಇಬಿ ಕಾಲೋನಿಯ ಪರೀಕ್ಷಾ ಕೇಂದ್ರದಲ್ಲಿ 214 ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 68 ಅಭ್ಯರ್ಥಿಗಳು ಮಾತ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next