Advertisement

ಕೊಳಂಕಿಗೆ ಸದ್ಭಾವನಾ ಪಾದಯಾತ್ರೆ

07:39 PM Sep 09, 2019 | Team Udayavani |

ರಾಯಚೂರು: ಜೀವೈಕ್ಯ ಕೊಳಂಕಿ ಗುರುಪಾದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳ 968ನೇ ವರ್ಷದ ಜಯಂತಿಯ ಪರ್ವು ಸಮಾರಾಧನೆ ಅಂಗವಾಗಿ ನಗರದ ಕಿಲ್ಲೇ ಬೃಹನ್ಮಠದಿಂದ ಕೊಳಂಕಿಯವರೆಗೆ ಹಮ್ಮಿಕೊಂಡ13ನೇ ವರ್ಷದ ಸದ್ಭಾವನಾ ಪಾದಯಾತ್ರೆಗೆ ಉತ್ತರಾಖಂಡ ರಾಜ್ಯದ ಊಖೀ ಮಠದ ಜಗದ್ಗುರು ಕೇದಾರನಾಥ ರಾವಲ್ ಭೀಮಾ ಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ರವಿವಾರ ಚಾಲನೆ ನೀಡಿದರು.

Advertisement

ತನ್ನಿಮಿತ್ತ ನಗರದ ಕಿಲ್ಲೇ ಬೃಹನ್ಮಠದಲ್ಲಿ ರವಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದ ನಂತರ ಸದ್ಭಾವನಾ ಪಾದಯಾತ್ರೆಗೆ ಶ್ರೀಗಳು ಚಾಲನೆ ನೀಡಿದರು. ಅದಕ್ಕೂ ಮುನ್ನ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು. ಜಗದ್ಗುರುಗಳಿಂದ ಶಾಸಕರು, ಮುಖಂಡರು, ಭಕ್ತರು ಆಶೀರ್ವಾದ ಪಡೆದರು. ಶ್ರೀಮಠದಿಂದ ಕೊಳಂಕಿವರೆಗೆ ಸಾಗುವ ಸದ್ಭಾವನಾ ಪಾದಯಾತ್ರೆಯಲ್ಲಿ ಸಾರೋಟಿನಲ್ಲಿ ಕುಳಿತ ಜಗದ್ಗುರುಗಳ ಸಾನಿಧ್ಯದಲ್ಲಿ ಮೆರವಣಿಗೆ ಜರುಗಿತು.

ಕಿಲ್ಲೇ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಿವಪ್ರಕಾಶ ಸ್ವಾಮೀಜಿ, ಶ್ರೀ ಕಲ್ಯಾಣ ಸ್ವಾಮೀಜಿ, ಶ್ರೀ ಗುರುಲಿಂಗ ಸ್ವಾಮೀಜಿ, ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಶಾಸಕರಾದ ಡಾ| ಶಿವರಾಜ ಪಾಟೀಲ, ಬಸನಗೌಡ ದದ್ದಲ್, ಮುಖಂಡರಾದ ಬಸವನಗೌಡ ಬ್ಯಾಗವಾಟ, ತ್ರಿವಿಕ್ರಮ ಜೋಶಿ ಇತರರು ಇದ್ದರು.

ರಾಜಕೀಯ ಬೇಡ: ಮಠಾಧೀಶರು ರಾಜಕೀಯ ಮಾಡದೇ ಧರ್ಮ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಉತ್ತರಾಖಂಡ ರಾಜ್ಯ ಊಖೀ ಮಠದ ಜಗದ್ಗುರು ಕೇದಾರನಾಥ ರಾವಲ್ ಭೀಮಾ ಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next