Advertisement
ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಗೆ ಆಯ್ಕೆಯಾಗಿರುವರಾಯಚೂರಿನ ಸರ್ವತೋಮುಖ ಪ್ರಗತಿ ಸರ್ಕಾರದ ಪ್ರಥಮಾದ್ಯತೆ ಆಗಬೇಕಿತ್ತು. ಆದರೆ, ಸಚಿವ ಸ್ಥಾನ ಹಂಚಿಕೆ ವೇಳೆಯೂ ಜಿಲ್ಲೆಯನ್ನು ಕಡೆಗಣಿಸಿದ್ದ ಸರ್ಕಾರ, ಈಗ ಉಸ್ತುವಾರಿ ಸಚಿವ ಸ್ಥಾನದ ವಿಚಾರದಲ್ಲೂ ಗಂಭೀರ ನಡೆ ಪ್ರದರ್ಶಿಸುತ್ತಿಲ್ಲ.
Related Articles
Advertisement
ಈ ಹಿಂದಿದ್ದ ಲಕ್ಷ್ಮಣ ಸವದಿ ಕೂಡ ಜಿಲ್ಲೆಗೆ ಶೂನ್ಯ ಕೊಡುಗೆ ನೀಡಿ ಹೋದರು. ಒಂದೆಡೆ ಉಪಮುಖ್ಯಮಂತ್ರಿ, ಮತ್ತೂಂದೆಡೆ ಸಾರಿಗೆ ಸಚಿವರಾಗಿದ್ದ ಅವರಿಗೆ ರಾಯಚೂರು ಉಸ್ತುವಾರಿ ನೀಡಿದ್ದರಿಂದ ಜಿಲ್ಲೆಯ ಅಭಿವೃದ್ಧಿಗೆ ಅಷ್ಟಾಗಿ ಒತ್ತು ಕೊಡಲಿಲ್ಲ. ಸಂಪುಟ ಪುನಾರಚನೆಯಲ್ಲಿ ಜಿಲ್ಲೆಗೆ ಸ್ಥಾನ ಸಿಕ್ಕಿದ್ದರೆ ಜಿಲ್ಲೆಯವರೇ ಸಚಿವರಾಗುತ್ತಿದ್ದರು. ಅದು ಕೂಡ ಆಗಲಿಲ್ಲ. ಈಗ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ರಾಯಚೂರು ಹೊಣೆ ನೀಡಿದ್ದು, ಅವರು ಕೂಡ ಎರಡೂ ಜಿಲ್ಲೆಗಳನ್ನು ನೋಡಿಕೊಳ್ಳಬೇಕಿದ್ದು, ಎಷ್ಟರ ಮಟ್ಟಿಗೆ ನ್ಯಾಯ ಕೊಡುವರೋ ನೋಡಬೇಕಿದೆ.
ಭವಿಷ್ಯ ನುಡಿದಿದ್ದ ದದ್ದಲ್: ಜಿಲ್ಲೆಯಲ್ಲಿ ಸಾಕಷ್ಟು ಮಸ್ಯೆಗಳಿವೆ. ಸರ್ಕಾರ ಪದೇ-ಪದೇ ಉಸ್ತುವಾರಿ ಸಚಿವರನ್ನು ಬದಲಿಸಿದರೇ ಯಾವ ಕೆಲಸಗಳು ಆಗುವುದಿಲ್ಲ. ವಸತಿ ಸಚಿವ ವಿ.ಸೋಮಣ್ಣನವರಾದರೂ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಪೂರೈಸಲಿ. ನಮ್ಮ ಕ್ಷೇತ್ರಗಳ ಸಮಸ್ಯೆಗಳಿಗೆ ಸುಖಾಂತ್ಯ ಕ ಲ್ಪಿಸಲಿ ಎಂದು ಗ್ರಾಮೀಣ ಕ್ಷೇತ್ರದ ಶಾಸಕ ದದ್ದಲ್ ಬಸನಗೌಡ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವರ ಎದುರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರ ಮಾತಿನಂತೆ ಕೇವಲ ಎರಡೇ ತಿಂಗಳಲ್ಲಿ ಉಸ್ತುವಾರಿ ಸಚಿವರ ಬದಲಾವಣೆ ಮಾಡಲಾಗಿದೆ.
ಸರ್ಕಾರಕ್ಕೆ ಈ ಭಾಗದ ಬಗ್ಗೆ ಕಾಳಜಿಯೇ ಇಲ್ಲ. ಕಾಟಾಚಾರಕ್ಕೆ ಉಸ್ತುವಾರಿ ಸಚಿವರನ್ನು ನೇಮಕ ಮಾಡುತ್ತಿದೆ. ಒಬ್ಬ ಉಸ್ತುವಾರಿ ಸಚಿವ ಒಂದು ಜಿಲ್ಲೆಯನ್ನು ಸಮಗ್ರವಾಗಿ ಅರಿತುಕೊಳ್ಳಬೇಕಾದರೆಕನಿಷ್ಠ 6 ತಿಂಗಳಾದರೂ ಬೇಕು.ಕೇವಲ ಎರಡು ಮೂರು ತಿಂಗಳಲ್ಲಿ ಬದಲಾವಣೆ ಮಾಡಿದರೆ ಅಭಿವೃದ್ಧಿ ಎಲ್ಲಿಂದ ಸಾಧ್ಯವಾಗಲಿದೆ. ಉಸ್ತುವಾರಿ ಸಚಿವರಾಗಿದ್ದ ಸೋಮಣ್ಣ ಜಿಲ್ಲೆಯ ಎಲ್ಲ ಸಮಸ್ಯೆಗಳನ್ನು ಆಲಿಸಿ ತಿಂಗಳಿಗೆ ಎರಡು ಸಭೆಗಳನ್ನು ಮಾಡುವುದಾಗಿ ತಿಳಿಸಿದ್ದರು. ಅಷ್ಟರಲ್ಲೇ ಸಚಿವ ಸ್ಥಾನ ಬದಲಾವಣೆ ಮಾಡಲಾಗಿದೆ.ಬಿ.ವಿ. ನಾಯಕ,ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇದು ನಿಜಕ್ಕೂ ಜಿಲ್ಲೆಯ ಜನರ ದುರ್ದೈವವೇ ಸರಿ. ಕೇಂದ್ರ ಸರ್ಕಾರವೇ ರಾಯಚೂರು ಜಿಲ್ಲೆ ಹಿಂದುಳಿದಿದೆ ಎಂದು ಮಹತ್ವಾಕಾಂಕ್ಷಿ ಯೋಜನೆಯಡಿ ಆಯ್ಕೆ ಮಾಡಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಅಭಿವೃದ್ಧಿ ಸರ್ಕಾರದ ಮೊದಲ ಆದ್ಯತೆ ಆಗಬೇಕಿತ್ತು. ಈ ರೀತಿ 3 ತಿಂಗಳಿಗೊಮ್ಮೆ ಸಚಿವರ ಬದಲಾವಣೆಗಳಾದರೆ ಜಿಲ್ಲೆಯ ಸಮಸ್ಯೆಗಳು ಈಡೇರುವುದಾದ್ರೂಹೇಗೆ?. ನೂತನ ಉಸ್ತುವಾರಿ ಸಚಿವರಿಗೂ 2ಜಿಲ್ಲೆಗಳ ಹೊಣೆ ನೀಡಿದ್ದು, ನಿರೀಕ್ಷಿತಪ್ರಗತಿ ಸಾಧ್ಯವಿಲ್ಲ.ಇವ್ರಾದರೂ ಪೂರ್ಣಪ್ರಮಾಣದಲ್ಲಿಕೆಲಸಮಾಡಲಿಎಂಬುದೇ ನಮ್ಮಆಶಯ.
ಬಸನಗೌಡ ದದ್ದಲ್,
ಗ್ರಾಮೀಣ ಶಾಸಕ, ರಾಯಚೂರು ಸಿದ್ಧಯ್ಯಸ್ವಾಮಿ ಕುಕುನೂರು