Advertisement

Raichur: ಬಾಲಕಿ ಮೇಲೆ ಹಂದಿ ಮಾರಣಾಂತಿಕ ದಾಳಿ

12:01 AM Mar 25, 2024 | Team Udayavani |

ರಾಯಚೂರು: ಇಲ್ಲಿನ ನಗರಸಭೆ ವ್ಯಾಪ್ತಿಯ ಹಾಜಿ‌ ಕಾಲೋನಿಯ ಅರಬ್ ಮೊಹಲ್ಲಾ ಪ್ರದೇಶದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಹಂದಿಯೊಂದು ದಾಳಿ‌ ಮಾಡಿ ಮೈಯಲ್ಲ ಗಾಯಗೊಳಿಸಿದ ಘಟನೆ ರವಿವಾರ ನಡೆದಿದೆ.

Advertisement

ಆಟವಾಡುತ್ತಿದ್ದ ಬಾಲಕಿ ಮೇಲೆ ದಾಳಿ ನಡೆಸಿದ ಹಂದಿ ಮುಖ ಕೈ ಕಾಲು ಕಚ್ಚಿ ಗಾಯಗೊಳಿಸಿದೆ. ಬಾಲಕಿಯನ್ನು ನೆಲಕ್ಕೆ ಕೆಡವಿ ಎಳೆದೊಯ್ಯುವಾಗ ಸ್ಥಳೀಯರು ಬಿಡಿಸಿಕೊಂಡಿದ್ದಾರೆ. ಬಾಲಕಿಯನ್ನು ರಿಮ್ಸ್ ದಾಖಲಿಸಿದ್ದು ಚಿಕಿತ್ಸೆ ಕೊಡಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ನಗರದಲ್ಲಿ ಬೀದಿ ನಾಯಿಗಳ ಉಪಟಳಕ್ಕೆ ಜನ ತತ್ತರಿಸಿದ್ದು ಈಗ ಹಂದಿಗಳ ಕಾಟ ಶುರುವಾಗಿರುವುದು ಆತಂಕಕ್ಕೆಡೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next