Advertisement

ಚುನಾವಣೆ ನಡೆದರೂ ಪ್ರಕಟಗೊಳ್ಳದ ರಾಯಚೂರು ನಗರಸಭೆ ಫಲಿತಾಂಶ

04:10 PM Nov 02, 2020 | keerthan |

ರಾಯಚೂರು: ಇಲ್ಲಿನ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೂ ಫಲಿತಾಂಶ ಪ್ರಕಟಿಸಲು ಹೈಕೋರ್ಟ್ ನ ಕಲಬುರಗಿ ಪೀಠ ತಡೆಯಾಜ್ಞೆ ನೀಡಿದೆ.

Advertisement

ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಆರೋಪದಡಿ ಸದಸ್ಯತ್ವ ರದ್ದತಿಗೆ ಗುರಿಯಾದ 31 ನೇ ವಾರ್ಡ್ ನ ಕಾಂಗ್ರೆಸ್ ಸದಸ್ಯ ರೇಣಮ್ಮ ಭೀಮರಾಯ ರಿಟ್ ಸಲ್ಲಿಸಿದ್ದಾರೆ. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ರೇಣಮ್ಮಗೆ ಗುಪ್ತ ಮತದಾನಕ್ಕೆ ಅವಕಾಶ ನೀಡುವಂತೆ ಸೂಚಿಸಿದ್ದು, ತಿರ್ಪು ಪ್ರಕಟಿಸದಂತೆ ತಿಳಿಸಿದೆ.

ಅದರನ್ವಯ ಚುನಾವಣೆ ನಡೆದರೂ ಫಲಿತಾಂಶ ಪ್ರಕಟವಾಗಿಲ್ಲ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ನ ಇಬ್ಬರಲ್ಲಿ ಸಾಜಿದ್ ಸಮೀರ್ ನಾಮಪತ್ರ ಹಿಂಪಡೆದಿದ್ದು, ಈ. ವಿನಯ ಕುಮಾರ್ ಅವಿರೋಧ ಆಯ್ಕೆ ನಡೆದಿದೆ.

ಇದನ್ನೂ ಓದಿ:ಕಳೆದ 2 ವರ್ಷದಿಂದ ನೆನಗುದಿಗೆ ಬಿದ್ದಿದ್ದ ಮಂಡ್ಯ ನಗರಸಭೆ ಆಡಳಿತ ಜೆಡಿಎಸ್ ತೆಕ್ಕೆಗೆ

ಉಪಾಧ್ಯಕ್ಷ ಸ್ಥಾನಕ್ಕೂ ಕಾಂಗ್ರೆಸ್ ಬಿಜೆಪಿಯಿಂದ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದು, ಸದಸ್ಯರು ಕೈ ಎತ್ತುವ ಮೂಲಕ ಆಯ್ಕೆ ಮಾಡಿದ್ದಾರೆ. ಆದರೆ, ನ್ಯಾಯಾಲಯದ ಮುಂದಿನ ಆದೇಶ ಬರುವವರೆಗೂ ಫಲಿತಾಂಶ ಪ್ರಕಟಿಸುವುದಿಲ್ಲ ಎಂದು ಚುನಾವಣಾಧಿಕಾರಿ ಸಂತೋಷ ಎಸ್. ಕಾಮಗೌಡ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next