ಲಿಂಗಸುಗೂರು : ಹೆರಿಗೆಗಾಗಿ ನರ್ಸ್ ಒಬ್ಬರು 25 ಸಾವಿರ ರೂ.ಗಳ ಬೇಡಿಕೆ ಇಟ್ಟ ಪ್ರಸಂಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಹಾಲಭಾವಿ ತಾಂಡಾದ ಗರ್ಭಿಣಿಯೊಬ್ಬರು ಹೆರಿಗೆಗಾಗಿ ತಾಲೂಕಾಸ್ಪತ್ರೆಗೆ ಬಂದ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ನರ್ಸ್, ವೈದ್ಯರ ಹೆಸರಿನಲ್ಲಿ 25 ಸಾವಿರ ರೂ. ಬೇಡಿಕೆ ಇಟ್ಟಿದ್ದಾರೆ. ಆಗ
ಸದ್ಯಕ್ಕೆ 5 ಸಾವಿರ ರೂ. ಕೊಡುತ್ತೇನೆ. ಉಳಿದ ಹಣ ನಾಳೆ ಕೊಡುವೆ. ದಯವಿಟ್ಟು ಹೆರಿಗೆ ಮಾಡಿಸಿ ಎಂದು ಗರ್ಭಿಣಿಯ ಸಂಬಂಧಿಕರು ಅಂಗಲಾಚಿದರೂ ಚಿಕಿತ್ಸೆ ನೀಡಿಲ್ಲ.
ಪೂರ್ತಿ ಹಣ ಕೊಡದಿದ್ದರೇ ವೈದ್ಯರು ಚಿಕಿತ್ಸೆಗೆ ಬರುವುದಿಲ್ಲ ಎಂದು ವೈದ್ಯರ ಹೆಸರಿನಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆಂದು ಆರೋಪಿಸಲಾಗಿದೆ. ಕೊನೆಗೆ ಗರ್ಭಿಣಿ ಮತ್ತು ಸಂಬಂಧಿಕರು ಬೇರೆ ಆಸ್ಪತ್ರೆಗೆ ತೆರಳಿದರು ಎನ್ನಲಾಗಿದೆ. ಇದನ್ನು ಕಂಡ ಸಾರ್ವಜನಿಕರು, ವೈದ್ಯರು ಮತ್ತು ನಸ್‌ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಲಿಖೀತ ದೂರು ಬಂದ ಮೇಲೆ ಕರ್ತವ್ಯದಲ್ಲಿದ್ದ ಇಬ್ಬರಿಗೆ ನೋಟಿಸ್ ಜಾರಿ ಮಾಡಲಾಗಿದೆ ಮತ್ತು ಎಚ್ಚರಿಕೆ ನೀಡಿದ್ದೇನೆ.
– ಡಾ| ರುದ್ರಗೌಡ ಪಾಟೀಲ್, ಮುಖ್ಯ ವೈದ್ಯಾಧಿ ಕಾರಿ, ಸಾರ್ವಜನಿಕ ಆಸ್ಪತ್ರೆ ಲಿಂಗಸುಗೂರು
ಇದನ್ನೂ ಓದಿ : ಈ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಹಾಲು, ಮೊಟ್ಟೆ ಕೊಡಲ್ಲ.. ಬಿಸಿಯೂಟಕ್ಕೆ ಅಕ್ಕಿಯೂ ಇಲ್ಲ