Advertisement

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

12:37 PM May 07, 2024 | Team Udayavani |

ರಾಯಚೂರು: ಮಾನ್ಚಿ ತಾಲೂಕಿನ ತಮ್ಮಾಪು ಗ್ರಾಮದಲ್ಲಿ ಸ್ಥಾಪಿಸಿದ ಮತಗಟ್ಟೆ ಮತದಾರರಿಲ್ಲದೆ ಭಣ ಭಣ ಎನ್ನುತ್ತಿತ್ತು. ಗ್ರಾಮದ ಜನ ಗುಳೆ ಹೋಗಿದ್ದು , ಇರುವಷ್ಟು ಜನ ಬೆಳಗ್ಗೆಯೇ ಬಂದು ಮತ ಚಲಾಯಿಸಿದ್ದಾರೆ.

Advertisement

ಒಟ್ಟು 330 ಮತದಾರರಿದ್ದು, ಬೆಳಗ್ಗೆ 11.30ರ ವೇಳೆಗೆ ಶೇ.44 ರಷ್ಟು ಮತದಾನವಾಗಿತ್ತು. ಗ್ರಾಮದಲ್ಲಿ ಬಹುತೇಕರು ದುಡಿದು ತಿನ್ನಲು ಬೆಂಗಳೂರಿಗೆ ಹೋಗಿದ್ದು ಮತದಾನ ಮಾಡಲು ಗ್ರಾಮಕ್ಕೆ ಬಂದಿಲ್ಲ. ಗ್ರಾಮಸ್ಥರನ್ನು ಕೇಳಿದರೆ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷಗಳ ನಾಯಕರು ಗುಳೆ ಹೋದವರನ್ನು ಕರೆ ಮಾಡಿ ಕರೆಯಿಸುತ್ತಿದ್ದರು. ಆದರೆ, ಈ ಬಾರಿ ಯಾರು ಅವರನ್ನು ಸಂಪರ್ಕಿಸಲು ಹೋಗಿಲ್ಲ. ಅಲ್ಲದೇ, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಗ್ರಾಮಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ ಎಂದು ದೂರಿದರು.

ಇದನ್ನೂ ಓದಿ: LS Polls: ಮತದಾರರಿಂದ ಪ್ರೋತ್ಸಾಹದಾಯಕ ಮತದಾನ… ಕಾಂಗ್ರೆಸ್ ನತ್ತ ಜನರ ಒಲವು: ಖರ್ಗೆ

Advertisement

Udayavani is now on Telegram. Click here to join our channel and stay updated with the latest news.

Next