Advertisement
ಈವರೆಗೆ ಜಿಲ್ಲೆಯಲ್ಲಿ 6 ಸಾವಿರ ಪಡಿತರ ಚೀಟಿಗಳನ್ನು ರದ್ದು ಮಾಡಿದ್ದು, ಸಾಕಷ್ಟು ಜನ ಸ್ವ ಇಚ್ಛೆಯಿಂದ ಸಲ್ಲಿಸುತ್ತಿಲ್ಲ. ಉಳ್ಳವರು, ಶ್ರೀಮಂತರು ಕೂಡ ಬಿಪಿಎಲ್ ಕಾರ್ಡ್‌ಗಳನ್ನು ಪಡೆಯುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ಅಕ್ರಮ ತಡೆಯಲು ಮುಂದಾದ ಉಳ್ಳವರಿಗೆ ತಾವಾಗಿಯೇ ಬಂದು ಪಡಿತರ ಚೀಟಿ ಸಲ್ಲಿಸುವಂತೆ ತಿಳಿಸಿತ್ತು. ಆದರೆ, ಇಲಾಖೆ ಸೂಚನೆಗೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ.
Related Articles
Advertisement
ಆದರೆ, ಈ ಅಂಕಿ ಅಂಶಗಳು 2011ರ ಜನಗಣತಿ ಪ್ರಕಾರವಾಗಿದ್ದು, ಈಗ ಸಾಕಷ್ಟು ಹೊಸ ಕಾರ್ಡ್‌ದಾರರು ಹುಟ್ಟಿಕೊಂಡಿದ್ದಾರೆ. ಇನ್ನುಮನೆ ಮಾಲೀಕರಿಗೆ ಮಾತ್ರ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಇಂದಿಗೂ ಸಾಕಷ್ಟು ಜನ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಅದಕ್ಕೆ ಸೂಕ್ತ ದಾಖಲೆಗಳೇ ಇಲ್ಲ. ಇದರಿಂದ ಗ್ರಾಮ ಪಂಚಾಯಿತಿಗಳಲ್ಲಿ ದಾಖಲೆಗಳೇ ಸಿಗುತ್ತಿಲ್ಲ ಎನ್ನುವುದು ಅಧಿಕಾರಿಗಳ ವಿವರಣೆ. ಆಧಾರ್ ಲಿಂಕ್ ಕಡ್ಡಾಯ: ಈ ಸಮಸ್ಯೆ ಅರಿತ ಇಲಾಖೆ ಈಗ ಕಡ್ಡಾಯವಾಗಿ ಕುಟುಂಬ ಸದಸ್ಯರೆಲ್ಲರ ಆಧಾರ್ ಕಾರ್ಡ್ ಪಡೆಯುತ್ತಿದ್ದು, ಪಡಿತರ ಚೀಟಿಗೆ ಲಿಂಕ್ ಮಾಡುತ್ತಿದೆ. ಇದರಿಂದ ಯಾರ ಹೆಸರಿನಲ್ಲಿ ಏನೇನು ದಾಖಲೆಗಳಿವೆ ಎಂಬುದು ಗೊತ್ತಾಗಲಿದೆ. ಅಲ್ಲದೇ, ಬ್ಯಾಂಕ್ ಖಾತೆಗಳಿಗೂ ಆಧಾರ್ ಲಿಂಕ್ ಇರುವ ಕಾರಣ ಆದಾಯ ತೆರಿಗೆ ಪಾವತಿಸುವವರು ಸುಲಭಕ್ಕೆ ಸಿಕ್ಕಿ ಬೀಳಲಿದ್ದು, ಅಂಥವರ ಕಾರ್ಡ್‌ಗಳನ್ನು ರದ್ದು ಮಾಡಲು ಅನುಕೂಲವಾಗಲಿದೆ.