Advertisement

ಅಂಗಡಿಯಲ್ಲೇ 30, 50, 100 ರೂ.ಗೆ ಮಾರಾಟವಾಗುತ್ತಿತ್ತು ಗಾಂಜಾ ಮಿಶ್ರಿತ ಚಾಕೋಲೇಟ್…

11:38 AM Aug 02, 2023 | Team Udayavani |

ರಾಯಚೂರು: ನಗರದಲ್ಲಿ ಗಾಂಜಾ ಮಿಶ್ರಿತ ಚಾಕೊಲೆಟ್ ಮಾರಾಟ ದಂಧೆ ಬೆಳಕಿಗೆ ಬಂದಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

Advertisement

30, 50, 100 ರೂ. ಗೆ ಗಾಂಜಾ ಚಾಕೊಲೇಟ್ (ಮಿಠಾಯಿ) ಮಾರಲಾಗುತ್ತಿತ್ತು. 6 ಗ್ರಾಂ. ತೂಕದ ಗಾಂಜಾ ಮಿಶ್ರಿತ ಚಾಕೊಲೇಟ್ ಅಂಗಡಿಗಳಲ್ಲೆ ಮಾರಲಾಗುತ್ತಿತ್ತು. ಉತ್ತರಪ್ರದೇಶದಲ್ಲಿ ತಯಾರಿಸಿದ ಚಾಕೊಲೇಟ್ ಗಳು ಎಂದು ತಿಳಿದು ಬಂದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಆರೋಪಿಗಳಾದ ರಾಚಯ್ಯ ಸ್ವಾಮಿ, ಅಂಬರಯ್ಯನನ್ನು ವಶಕ್ಕೆ ಪಡೆದು ಒಟ್ಟು 482 ಗಾಂಜಾ ಚಾಕೋಲೇಟ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ನಗರದ ಎಲ್.ಬಿ.ಎಸ್ ನಗರ ಬಡಾವಣೆ ಮತ್ತು ಕೈಗಾರಿಕಾ ಪ್ರದೇಶದ ಏರಿಯಾಗಳಲ್ಲಿ ಈ ದಂಧೆ ಜೋರಾಗಿತ್ತು. ದಾಳಿ ವೇಳೆ ಪಾನಾ ಮುನಾಕಾ, ಆನಂದ ಮುನಾಕಾ ಚಾಕೊಲೇಟ್ ಪತ್ತೆಯಾಗಿವೆ. ಬಂಧಿತರಿಂದ ಕಿಂಗ್ ಪಿನ್ ಬಗ್ಗೆ ಮಾಹಿತಿ ಕಲೆಹಾಕಿದ ಅಬಕಾರಿ ಪೊಲೀಸರು ಆತನ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ತೆರಳಲು ಬಸ್ ಇಲ್ಲದೆ ಪರದಾಟ: ಡಿಸಿಎಂ ಸ್ವಕ್ಷೇತ್ರದಲ್ಲಿ ಬಸ್ ತಡೆದು ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next