ರಾಯಚೂರು: ಸಹಸ್ರಾರು ಮಕ್ಕಳ ಜ್ಞಾನದಾಹ ನೀಗಿಸುತ್ತಿರುವ ರಾಯಚೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ಸ್ಥಳಾಭಾವದ್ದೆ ಸಮಸ್ಯೆ. ಗ್ರಂಥಾಲಯಕ್ಕೆ ನಿತ್ಯ ಬರುವ ಸಾಕಷ್ಟು ವಿದ್ಯಾರ್ಥಿನಿಯರಿಗೆ ಸ್ಥಳ ಸಿಗದೆ ನೆಲದ ಮೇಲೆ, ಉದ್ಯಾನವನದಲ್ಲಿ ಕುಳಿತು ಓದುವಂತ ಪರಿಸ್ಥಿತಿ ಇದೆ. ನಗರ ಕೇಂದ್ರ ಗ್ರಂಥಾಲಯಕ್ಕೆ ಸಾವಿರಾರು ವಿದ್ಯಾರ್ಥಿಗಳು ನಿತ್ಯ ಓದಲು ಆಗಮಿಸುತ್ತಾರೆ.
Advertisement
ಅದರಲ್ಲೂ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಇದೇ ಅಧ್ಯಯನ ಕೇಂದ್ರ. ಆದರೆ, ಈಗಿರುವ ಕಟ್ಟಡ ತೀರ ಇಕ್ಕಟ್ಟಾಗಿದೆ. ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಆಸನಗಳೇ ಸಿಗುವುದಿಲ್ಲ. ಇನ್ನೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿಭಾಗ ಮಾಡಲಾಗಿದೆ ಆದರೂ ಅಲ್ಲಿ ಅಬ್ಬಬ್ಟಾ ಎಂದರೆ 20-30 ವಿದ್ಯಾರ್ಥಿಗಳು ಕೂಡಬಹುದಷ್ಟೇ. ಹೀಗಾಗಿ ಬಹುತೇಕ ವಿದ್ಯಾರ್ಥಿನಿಯರು ಅಧ್ಯಯನ ಮಾಡಲು ನೆಲದ ಮೇಲೆ, ರ್ಯಾಕ್‌ಗಳ ಮಧ್ಯ, ಇಲ್ಲವೇ ಹೊರಗಿನ ಉದ್ಯಾನದಲ್ಲೇ ಕೂಡಬೇಕಿದೆ. ಸಾಮಾನ್ಯ ದಿನಗಳಲ್ಲಿಯೇ ಈ ಸಮಸ್ಯೆಯಾದರೆ ಇನ್ನೂ ರಜಾ ದಿನಗಳಲ್ಲಂತೂ ಸ್ಥಿತಿ ಗಂಭೀರವಾಗಿರುತ್ತದೆ. ಕೆಲವೊಮ್ಮೆ ಸ್ಥಳ ಸಿಗದೆ ವಿದ್ಯಾರ್ಥಿಗಳು ಹಿಂದಿರುಗಿದ ನಿದರ್ಶನ ಕೂಡ ಸಾಕಷ್ಟಿವೆ.
ಸದಸ್ಯರಿದ್ದಾರೆ. ನಗರದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿದ್ದು, ಸಾಮಾನ್ಯ ಜನರೂ ಬರುವುದರಿಂದ ವಿದ್ಯಾರ್ಥಿಗಳಿಗೆ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ. ಗೋಡಾನ್ ಇಲ್ಲ: ಇದಕ್ಕೆ ಮುಖ್ಯ ಕಾರಣ ಪುಸ್ತಕಗಳ ಸಂಗ್ರಹಕ್ಕೆ ಪತ್ಯೇಕ ಗೋಡಾನ್ ಇಲ್ಲದಿರುವುದು. ಇದು ಕೇಂದ್ರ ಗ್ರಂಥಾಲಯವಾದ್ದರಿಂದ ಜಿಲ್ಲೆಗೆ ಸರಬರಾಜಾಗುವ ಎಲ್ಲ ಪುಸ್ತಕಗಳು ಇಲ್ಲಿಗೆ ಬರುತ್ತವೆ. ಅವುಗಳಲ್ಲಿ ಕೆಲವನ್ನು ಕೋಟೆ ಪಕ್ಕದ ವಾಚಾನಾಯಲದಲ್ಲಿ ಸಂಗ್ರಹಿಸಿದರೆ, ಬಹುತೇಕ ಪುಸ್ತಕಗಳನ್ನು ಇದೇ ಗ್ರಂಥಾಲಯದಲ್ಲಿಡಲಾಗುತ್ತಿದೆ. ಹೀಗಾಗಿ ಓದುಗರು ಮೂಟೆಗಳ ಪಕ್ಕದಲ್ಲೇ, ಸಂದಿ ಗೊಂದಿಗಳಲ್ಲೇ ಕುಳಿತು ಓದುವಂತಾಗಿದೆ. ಪ್ರತ್ಯೇಕ ಗೋಡಾನ್ ವ್ಯವಸ್ಥೆ ಕಲ್ಪಿಸಿದರೆ, ಇಲ್ಲಿ ಮೂಟೆಗಟ್ಟಿದ ಪುಸ್ತಕಗಳನ್ನೆಲ್ಲ ತೆರವು
ಮಾಡಬಹುದು. ಸ್ವತ್ಛಂದ ಗಾಳಿ ಬೆಳಕಿನಲ್ಲಿ ಓದಬಹುದು ಎನ್ನುತ್ತಾರೆ ವಿದ್ಯಾರ್ಥಿಗಳು.
Related Articles
Advertisement
ಕೊಳಚೆ ಪ್ರದೇಶಗಳಲ್ಲಿಲ್ಲ ಕಟ್ಟಡ: ಇನ್ನೂ ನಗರದ ಜಿಲ್ಲೆಯಲ್ಲಿ ನಾಲ್ಕು ಕೊಳಚೆ ಪ್ರದೇಶಗಳಲ್ಲಿ ಗ್ರಂಥಾಲಯ ನಡೆಸಲಾಗುತ್ತಿದೆ. ನಗರದಲ್ಲಿ ಮೂರು, ಮಾನ್ವಿಯಲ್ಲಿ ಒಂದು ಗ್ರಂಥಾಲಯವಿದೆ. ಆದರೆ, ಎಲ್ಲಿಯೂ ಗ್ರಂಥಾಲಯಕ್ಕೆ ಸ್ವಂತ ಕಟ್ಟಡಗಳಿಲ್ಲ. ಈ ಕುರಿತು ನಗರಸಭೆ ಗಮನಕ್ಕೆ ತಂದಿದ್ದು ನಿವೇಶನ ಗುರುತಿಸುವ ಕೆಲಸವಾಗುತ್ತಿಲ್ಲ ಎನ್ನುವುದು ಅಧಿಕಾರಿಗಳ ವಿವರಣೆ.