Advertisement
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಜಾತಿ ಗಣತಿಗೆ ಆಕ್ಷೇಪ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಾತಿ ಗಣತಿಯ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸಿ ಏನಾದರೂ ಲೋಪಗಳಿದ್ದರೆ ಸರಿಪಡಿಸಲಾಗುವುದು ಎಂದು ತಿಳಿಸಿದರು.
Related Articles
Advertisement
ಸತೀಶ್ ಜಾರಕಿಹೊಳಿ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದರೆ ಚರ್ಚೆ ನಡೆಯುತ್ತವೆ. ಭೋಸರಾಜು ಇನ್ಯಾರನ್ನೋ ಭೇಟಿ ಮಾಡಿದರೆ ಚರ್ಚೆ ನಡೆಯುತ್ತವೆ. ಭೇಟಿ ಮಾಡಿದಾಕ್ಷಣ ಏನೋ ಆಗುತ್ತಿದೆಯಂತಲ್ಲ. ಸಿಎಂ ಸ್ಥಾನ ಬದಲಾವಣೆ ಬರೀ ಊಹಾಪೋಹ ಎಂದರು.
ಆರ್.ಅಶೋಕ ಅವರಿಗೆ ರಾಜೀನಾಮೆ ಕೊಡುವುದಿದ್ದರೆ ಕೊಡಲಿ. ನಾನು ತಪ್ಪು ಮಾಡಿದ್ದರೆ ಹೆದರಿಕೊಳ್ಳುತ್ತೇನೆ. ನಾನು ತಪ್ಪು ಮಾಡಿದ್ದೇನೆಂದು ಯಾರಾದ್ರೂ ಹೇಳಿದ್ದಾರಾ? ತಪ್ಪೇ ಮಾಡಿಲ್ಲ ಎಂದ ಮೇಲೆ ಯಾರಿಗೂ ಭಯ ಪಡುವ ಅಗತ್ಯವಿಲ್ಲ. ಬಿಜೆಪಿಯವರಿಗೂ ಭಯ ಪಡಲ್ಲ. ಜೆಡಿಎಸ್ ನವರಿಗೂ ಭಯ ಪಡಲ್ಲ ಎಂದರು.
ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಸ್ವಾಭಿಮಾನ ಹೆಚ್ಚಾಗಬೆಕು ಎಂದು ಮಾನ್ವಿಯಲ್ಲಿ ಸ್ವಾಭಿಮಾನಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಯಾರ ಸ್ವಾಭಿಮಾನಕ್ಕೆ ಧಕ್ಕೆಯಾಗಿಲ್ಲ ಎಂದ ಸಿಎಂ, ಜಿಟಿ ದೇವೆಗೌಡ ಜೆಡಿಎಸ್ ಪಕ್ಷದ ಹಿರಿಯ ಮುಖಂಡ. ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರು ಮುಡಾ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.