Advertisement

Raichur; ಎಸಿ ಕಚೇರಿ ನೌಕರ ಆತ್ಮಹತ್ಯೆ

01:05 PM Feb 09, 2024 | Team Udayavani |

ರಾಯಚೂರು: ನಗರದ ಸಹಾಯಕ ಆಯುಕ್ತರ ಕಚೇರಿ ಡಿ ದರ್ಜೆ ನೌಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ನಡೆದಿದೆ.

Advertisement

ಎಸಿ ಕಚೇರಿಯ ಭೂ ದಾಖಲೆಗಳ ಕೀಪರ್ ಹುದ್ದೆಯಲ್ಲಿದ್ದ ವಾಸೀಂ ಚೌಧರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ನಗರದ ಜಿಲ್ಲಾ ಕ್ರೀಡಾಂಗಣ ಬಳಿಯ ಈಜುಕೊಳದ ಹತ್ತಿರ ವಾಹನಗಳಿಗೆ ಬಳಸುವ ಕೂಲೆಂಟ್ ವಾಟರ್ ಜತೆಗೆ ಆಸಿಡ್ ಬೆರೆಸಿ ಕುಡಿದಿದ್ದಾನೆ ಎಂದು ತಿಳಿದು ಬಂದಿದೆ.

ನರಳಾಡುತ್ತಿದ್ದ ಈತನನ್ನು ಗಮನಿಸಿದ ಸ್ಥಳೀಯರು ಕೂಡಲೇ ಖಾಸಗಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್ ಗೆ ಕಳುಹಿಸಲಾಗಿತ್ತು. ಆದರೆ ಆ ಮಧ್ಯೆ ಆತ ಸಾವನಪ್ಪಿರುವುದಾಗಿ ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next