Advertisement

ರಾಯಚೂರು: ಮತ್ತೆ 3 ಪಾಸಿಟಿವ್‌

08:47 AM Jun 24, 2020 | Suhan S |

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್ ಏರಿಳಿತ ಮುಂದುವರಿದಿದ್ದು, ಮಂಗಳವಾರ ಮತ್ತೆ ಮೂರು ಪಾಸಿಟಿವ್‌ ಪ್ರಕರಣ ದೃಢಪಟ್ಟಿವೆ. ತೆಲಂಗಾಣದಿಂದ ಹಿಂದಿರುಗಿದ ನಗರದ 32 ವರ್ಷದ ಪುರುಷನಿಗೆ, ಐಎಲ್‌ಐನಿಂದ ನಗರದ 52 ವರ್ಷದ ಮಹಿಳೆಗೆ ಹಾಗೂ ಮಹಾರಾಷ್ಟ್ರದಿಂದ ಬಂದ ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ 60 ವರ್ಷದ ಪುರುಷನಿಗೆ ಸೋಂಕು ಇರುವುದು ದೃಢಪಟ್ಟಿದೆ.

Advertisement

ಮಂಗಳವಾರ ದೇವದುರ್ಗ ತಾಲೂಕಿನಿಂದ 91, ಲಿಂಗಸುಗೂರು ತಾಲೂಕಿನಿಂದ 23, ಮಾನ್ವಿ ತಾಲೂಕಿನಿಂದ 102, ಸಿಂಧನೂರು ತಾಲೂಕಿನಿಂದ 74 ಮತ್ತು ರಾಯಚೂರು ತಾಲೂಕಿನಿಂದ 65 ಸೇರಿದಂತೆ 355 ಜನರ ಗಂಟಲಿನ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹಿಂದೆ ಕಳುಹಿಸಿದ್ದ ವರದಿಗಳಲ್ಲಿ 266 ನೆಗೆಟಿವ್‌ ಆಗಿವೆ. ಮೂರು ಪಾಸಿಟಿವ್‌ ಎಂದು ದೃಢಪಟ್ಟಿವೆ. ಒಟ್ಟಾರೆ ಜಿಲ್ಲೆಯಿಂದ ಈವರೆಗೆ 20,722 ಜನರ ಗಂಟಲು ದ್ರವ ಮಾದರಿಯನ್ನು ಕೊರೊನಾ ಪರೀಕ್ಷೆಗಾಗಿ ಕಳುಹಿಸಿದ್ದು, ಅವುಗಳಲ್ಲಿ 19,327 ವರದಿಗಳು ನೆಗೆಟಿವ್‌ ಬಂದಿವೆ.

ಉಳಿದ 955 ಸ್ಯಾಂಪಲ್‌ ಗಳ ಫಲಿತಾಂಶ ಬರಬೇಕಿದೆ. ಫೀವರ್‌ ಕ್ಲಿನಿಕ್‌ಗಳಲ್ಲಿಂದು 356 ಜನರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ. ಗುಣಮುಖರಾದ ಕಾರಣ 308 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ವಿವಿಧ ಕ್ವಾರಂಟೈನ್‌ ಕೇಂದ್ರಗಳಲ್ಲಿ 155 ಜನರನ್ನು ಇರಿಸಿ ನಿಗಾವಹಿಸಲಾಗಿದೆ. ಕೋವಿಡ್‌-19 ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next