Advertisement

ಕೊರೊನಾ ಸೋಂಕು ಸಮುದಾಯಕ್ಕೆ ಹರಡುವ ಅಪಾಯ

10:58 PM Apr 29, 2021 | Team Udayavani |

ಲಿಂಗಸುಗೂರು: ಕೊರೊನಾ ಸೋಂಕು ನಗರ, ಪಟ್ಟಣಗಳಿಂದ ಹಳ್ಳಿಯ ಸಮುದಾಯಕ್ಕೂ ಹರಡುವ ಭೀತಿ ಇದೆ. ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕು. ಇದಕ್ಕೆ ತಾಲೂಕು ಅ ಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಪ್ರಧಾನ, ಸತ್ರ ನ್ಯಾಯಾ  ಧೀಶ ಮಲ್ಲಿಕಾರ್ಜುನಗೌಡ ತಿಳಿಸಿದರು. ಸ್ಥಳೀಯ ಜೆಎಂಎಫ್‌ಸಿ ಹಿರಿಯ ಶ್ರೇಣಿ ನ್ಯಾಯಾ ಧೀಶ ಲಕ್ಷಿಕಾಂತ ಮಿಸ್ಕಿನ್‌ ಹಾಗೂ ಮಾಧ್ಯಮದವರೊಂದಿಗೆ ಬುಧವಾರ ವಿಡಿಯೋ ಸಂವಾದ ನಡೆಸಿದ ನ್ಯಾಯಾಧೀಶರು, ನಗರಗಳಿಗೆ ಗುಳೆ ಹೋಗಿದ್ದ 77 ಸಾವಿರಕ್ಕೂ ಅಧಿ ಕ ಜನರು ಬೆಂಗಳೂರಿನಿಂದ ಹಳ್ಳಿಗಳಿಗೆ ಬಂದಿದ್ದಾರೆ.

Advertisement

ವಲಸೆ ಕಾರ್ಮಿಕರು ವಾಪಸ್‌ ಬಂದಿರುವ ಕಾರಣ ಕೊರೊನಾ ಸೋಂಕು ಸಮುದಾಯಕ್ಕೂ ಹರಡುವ ಭೀತಿ ಇದೆ. ಕೂಡಲೇ ತಾಲೂಕಿನ ಆಡಳಿತದೊಂದಿಗೆ ಚರ್ಚಿಸಿ ಕೆಮ್ಮು, ನೆಗಡಿ ಸೇರಿದಂತೆ ಕೊರೊನಾ ಲಕ್ಷಣಗಳಿರುವವರನ್ನು ಹೋಮ್‌ ಕ್ವಾರಂಟೈನ್‌ ಮಾಡಿಸಿ. ಇಲ್ಲದಿದ್ದರೆ ಸೋಂಕು ವ್ಯಾಪಕವಾಗಿ ಹರಡುವ ಸ್ಪಷ್ಟ ಲಕ್ಷಣಗಳಿವೆ. ಯಾವುದೇ ಕಾರಣಕ್ಕೂ ಅಧಿ  ಕಾರಿ ವರ್ಗವು ಮೈ ಮರೆಯಬಾರದು, ನಿರ್ಲಕ್ಷ ವಹಿಸಿದರೆ ಅಪಾಯವಿದೆ ಎಂದು ಎಚ್ಚರಿಸಿದರು.

ಹಳ್ಳಿಗಳಲ್ಲಿ ಸೋಂಕು ಹರಡದಂತೆ ಆಶಾ, ಅಂಗನವಾಡಿ ಸೇರಿದಂತೆ ಕಾರ್ಯಕರ್ತರನ್ನು ಬಳಸಿಕೊಳ್ಳಬೇಕು. ತಾಲೂಕು ಮಟ್ಟದ ಅಧಿಕಾರಿಗಳಿಗೂ ಸೂಕ್ತ ಎಚ್ಚರಿಕೆ ನೀಡಿ ಮತ್ತು ರೋಗದ ನಿಯಮಗಳ ಪಾಲನೆ ಕುರಿತು ಜನರಿಗೆ ಮಾಹಿತಿ ನೀಡಲು ಮಾಧ್ಯಮಗಳನ್ನು ಪಾತ್ರ ಪ್ರಮುಖವಾಗಿದೆ. ಆದ್ದರಿಂದ ಮಾಧ್ಯಮಗಳ ಸೇವೆ ಬಳಸಿಕೊಂಡು ಜನರಿಗೆ ಸಂದೇಶಗಳನ್ನು ರವಾನಿಸಬೇಕು, ಆರೋಗ್ಯ ಇಲಾಖೆ ಮೂಲಕ ಜನರಿಗೆ ಮಾಸ್ಕ್ ವಿತರಣೆ ಮಾಡಿಸಬೇಕು ಎಂದು ತಿಳಿಸಿದರು.

ಮಸ್ಕಿ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಯಾವುದೇ ರೀತಿಯ ವಿಜಯೋತ್ಸವ ಆಚರಣೆ ಮಾಡದಂತೆ ಮಸ್ಕಿಯ ತಹಶೀಲ್ದಾರ್‌, ಸಿಪಿಐ ಸೇರಿದಂತೆ ಅಧಿಕಾರಿಗಳನ್ನು ಕರೆದು ಸೂಕ್ತ ಎಚ್ಚರಿಕೆ ವಹಿಸಲು ತಿಳಿಸಬೇಕು. ಅಧಿಕಾರಿ ವರ್ಗ ಕಠಿಣ ಕ್ರಮ ಕೈಗೊಳ್ಳಬೇಕು. ಸರ್ಕಾರಿ ನಿಯಮಗಳನ್ನು ಜನರು ಪಾಲನೆ ಮಾಡಬೇಕು. ಇಲ್ಲದಿದ್ದರೆ ಪರಿಸ್ಥಿತಿ ವಿಷಮವಾಗಲಿದೆ ಎಂದು ಎಚ್ಚರಿಸಿದರು.

ತಕ್ಷಣವೇ ತಾಲೂಕು ಮಟ್ಟದ ಅಧಿ ಕಾರಿಗಳನ್ನು ಕರೆದು ಸಭೆ ನಡೆಸಿ ಕೊರೊನಾ ಸೋಂಕು ನಿಯಂತ್ರಣದ ಕುರಿತು ನಿಯಮಗಳ ಕಟ್ಟುನಿಟ್ಟಿನ ಪಾಲನೆ ಹಾಗೂ ಜನರಿಗೆ ಮುನ್ನೆಚ್ಚರಿಕಾ ಕ್ರಮಗಳ ಕುರಿತು ತಿಳಿಸಲಾಗುವುದೆಂದು ಜೆಎಂಎಫ್‌ಸಿ ನ್ಯಾಯಾ ಧೀಶ ಲಕ್ಷಿಕಾಂತ ಮಿಸ್ಕಿನ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next