Advertisement

ಕೇಂದ್ರದ ವಿರುದ್ಧ ರೈ ವಾಗ್ಧಾಳಿ

11:00 PM Sep 08, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ ಸೆಂಥಿಲ್‌ ಆಡಳಿತ ನಡೆಸುವ ಸಮಯದಲ್ಲಿ ಅತ್ಯಂತ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಎಂದು ಎಲ್ಲ ರಾಜಕೀಯ ಪಕ್ಷಗಳು, ಜನರು ಹೇಳುತ್ತಿದ್ದರು. ಆದರೆ ಸೆಂಥಿಲ್‌ ರಾಜೀ ನಾಮೆ ನೀಡುವಾಗ ಕೇಂದ್ರ ಸರಕಾರದ ವಿರುದ್ಧ ಬೊಟ್ಟು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಅವರ ಪ್ರಾಮಾಣಿಕತೆಯನ್ನೇ ಈಗ ಕೆಲವರು ಪ್ರಶ್ನಿಸುತ್ತಿದ್ದಾರೆಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಜಿಲ್ಲಾಧಿಕಾರಿಯಾಗಿದ್ದಾಗ ಸೆಂಥಿಲ್‌ ವಿರುದ್ಧ ಏನನ್ನೂ ಮಾತನಾಡದವರು ಈಗ ಅವರು ಸರಿ ಇಲ್ಲ ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರ, ಅದರ ನೀತಿಯನ್ನು ಪ್ರಶ್ನಿಸಿದವರನ್ನೆಲ್ಲ ದೇಶದ್ರೋಹಿಗಳು ಎಂಬಂತೆ ಪರಿಗಣಿಸಲಾಗುತ್ತಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಮೋದಿ-ಇಮ್ರಾನ್‌ ಒಂದೇ!: ಪ್ರಧಾನಿ ಮೋದಿಗೆ ಚುನಾವಣೆ ಗೆಲ್ಲುವುದರಲ್ಲೇ ಆಸಕ್ತಿಯೇ ವಿನಃ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಜನರ ಒಳಿತಿನ ಚಿಂತೆಯಿಲ್ಲ. ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಇಬ್ಬರೂ ಒಂದೇ ರೀತಿಯವರು. ಇಬ್ಬರೂ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಒಳಒಪ್ಪಂದ ಮಾಡಿಕೊಂಡಿ ದ್ದಾರೆ. ಅದಕ್ಕಾಗಿಯೇ ಇಬ್ಬರು ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದಾರೆಂದು ರಮಾನಾಥ ರೈ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next