Advertisement

IPL 2023: ಲಕ್ನೋ ಸೂಪರ್‌ ಜೈಂಟ್ಸ್‌ಗೆ ರಾಹುಲ್‌ ಗಾಯದ ಚಿಂತೆ

11:00 PM May 02, 2023 | Team Udayavani |

ಲಕ್ನೋ: ಒಂದು ದಿನದ ಹಿಂದಷ್ಟೇ ತವರಿನಂಗಳದಲ್ಲಿ ಆರ್‌ಸಿಬಿ ವಿರುದ್ಧ ಬ್ಯಾಟಿಂಗ್‌ ಕುಸಿತ ಅನುಭವಿಸಿದ್ದ ಲಕ್ನೋ ಸೂಪರ್‌ಜೈಂಟ್ಸ್‌ ಬುಧವಾರ ಮತ್ತೊಂದು ಬಲಿಷ್ಠ ತಂಡವಾದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಅಗ್ನಿಪರೀಕ್ಷೆ ಎದುರಿಸಲಿದೆ.

Advertisement

ಧೋನಿ ಪಡೆ ಕೂಡ ಕಳೆದೆರಡು ಪಂದ್ಯಗಳಲ್ಲಿ ರಾಜಸ್ಥಾನ್‌ ರಾಯಲ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೋಲಿಗೆ ತುತ್ತಾಗಿತ್ತು. ಹೀಗಾಗಿ ಚೆನ್ನೈಗೂ ಗೆಲುವಿನ ಟ್ರ್ಯಾಕ್‌ ಏರಬೇಕಾದ ಅಗತ್ಯ ಇದೆ.

ಇದು ಇತ್ತಂಡಗಳ ನಡುವಿನ ದ್ವಿತೀಯ ಸುತ್ತಿನ ಮುಖಾಮುಖೀ. ಚೆನ್ನೈಯಲ್ಲಿ ನಡೆದ ಮೊದಲ ಸುತ್ತಿನ ಹಣಾಹಣಿಯಲ್ಲಿ ಧೋನಿ ಟೀಮ್‌ 12 ರನ್ನುಗಳಿಂದ ಗೆದ್ದಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವ ಯೋಜನೆ ಲಕ್ನೋ ತಂಡದ್ದು. ಆದರೆ ನಾಯಕ ಕೆ.ಎಲ್‌. ರಾಹುಲ್‌ ಮತ್ತು ವೇಗಿ ಜೈದೇವ್‌ ಉನಾದ್ಕತ್‌ ಅವರಿಗೆ ಎದುರಾಗಿರುವ ಗಾಯ ಲಕ್ನೋಗೆ ದೊಡ್ಡ ಸಮಸ್ಯೆಯಾಗಿ ಕಾಡುವ ಸಾಧ್ಯತೆ ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next