Advertisement
ಮಧ್ಯಾಹ್ನ 3:30ಕ್ಕೆ ಹೊಟೇಲ್‌ಗೆ ಆಗಮಿಸಿದ ರಾಹುಲ್ ಗಾಂಧಿ ಸುಮಾರು 1 ಗಂಟೆ ಸಭೆ ನಡೆಸಿದರು. ದೇಶದಲ್ಲಿನಡೆಯುತ್ತಿರುವ ಪ್ರಚಲಿತ ವಿದ್ಯಮಾನ, ಕರ್ನಾಟಕದ ವಿಶೇಷತೆ ಕುರಿತು ರಾಹುಲ್ ಗಾಂಧಿ ಮಾಹಿತಿ ಪಡೆದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಕಾಂಗ್ರೆಸ್ ಮುಖಂಡ ಬಿ.ಎಲ್.ಶಂಕರ್ ಮಾತನಾಡಿ, ರಾಹುಲ್ ಗಾಂಧಿ ಅವರು
ದೇಶದಲ್ಲಿನ ಸ್ಥಿತಿ-ಗತಿ ಕುರಿತು ಚಿಂತಕರಿಂದ ಮಾಹಿತಿ ಪಡೆದರು. ಇದು ರಾಜಕೀಯ ಚರ್ಚೆಯ ಸಭೆಯಾಗಿರಲಿಲ್ಲ, ಸಾಮಾಜಿಕ ಸ್ಥಿತಿ-ಗತಿ ಕುರಿತು ಗಣ್ಯರ ಅಭಿಪ್ರಾಯ ತಿಳಿಯುವ ಸಭೆಯಾಗಿತ್ತು. ಬುದ್ಧಿಛಿಜೀವಿಗಳ ಕೆಲ ಸಲಹೆಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುವ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ನುಡಿದರು. ದಕ್ಷಿಣಾಯಣ ರಾಜಕೀಯೇತರ ಸಂಸ್ಥೆಯ ಸದಸ್ಯರನ್ನು ರಾಹುಲ್ ಗಾಂಧಿ ಆಹ್ವಾನಿಸಿದ್ದರಿಂದ ನಾವೆಲ್ಲ ಸಭೆಯಲ್ಲಿ ಪಾಲ್ಗೊಂಡಿದ್ದೆವು ಎಂದು ಪ್ರೊ.ರಾಜೇಂದ್ರ ಚೆನ್ನಿ ಹೇಳಿದರು.