Advertisement

ಅಮೆರಿಕದಲ್ಲಿ ರಾಹುಲ್‌ ಟ್ರಕ್‌ ಯಾತ್ರೆ

10:36 PM Jun 13, 2023 | Team Udayavani |

ವಾಷಿಂಗ್ಟನ್‌: ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಇತ್ತೀಚೆಗೆ ಅಮೆರಿಕ ಪ್ರವಾಸ ತೆರಳಿದ್ದಾಗ ವಾಷಿಂಗ್ಟನ್‌ನಿಂದ ನ್ಯೂಯಾರ್ಕ್‌ಗೆ ಟ್ರಕ್‌ನಲ್ಲಿ ಪ್ರಯಾಣಿಸಿದ್ದರು. ಈ ಬಗ್ಗೆ ಕಾಂಗ್ರೆಸ್‌ ಫೋಟೋ ಮತ್ತು ವಿಡಿಯೋಗಳನ್ನು ಟ್ವೀಟ್‌ ಮಾಡಿದೆ.

Advertisement

ಒಟ್ಟು 190 ಕಿಮೀ ಪ್ರಯಾಣದ ವೇಳೆ ಭಾರತ ಮೂಲದ ತಲ್ಜೀಂದರ್‌ ಸಿಂಗ್‌, ವಿಕ್ಕಿ ಗಿಲ್‌ ಹಾಗೂ ರಂಜಿತ್‌ ಸಿಂಗ್‌ ಜತೆಗೆ ಸಾಗರೋತ್ತರ ಭಾರತೀಯ ಟ್ರಕ್‌ಚಾಲಕರ ಜೀವನ, ಸಂಕಷ್ಟ, ಬದುಕು, ಟ್ರಕ್‌ ಚಾಲಕರ ಸುರಕ್ಷತೆಗೆ ಬಗ್ಗೆ ಅಮೆರಿಕ ವಹಿಸಿರುವ ಕಾಳಜಿಯನ್ನು ತಿಳಿದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್‌ ಅವರು ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ಪಂಜಾಬಿ ಗಾಯಕ ಸಿಧುಮೂಸೆವಾಲಾ ಅವರ ಹಾಡನ್ನು ಹಾಕಿಸಿಕೊಂಡಿದ್ದಾರೆ. ಅಮೆರಿಕಕ್ಕೆ ತೆರಳುವ ಮುನ್ನ ನವದೆಹಲಿಯಿಂದ ಚಂಡೀಗಢಕ್ಕೆ ಟ್ರಕ್‌ನಲ್ಲಿ ಪ್ರಯಾಣ ಮಾಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next