Advertisement

ಮಾರ್ಚ್‌ 20ರಿಂದ 2 ದಿನ ರಾಹುಲ್‌ ಕರಾವಳಿ, ಮಲೆನಾಡು ಭೇಟಿ

07:37 PM Mar 17, 2018 | Team Udayavani |

ಬೆಂಗಳೂರು : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಇದೇ ಮಾರ್ಚ್‌ 20ರಿಂದ ತನ್ನ ಮೂರನೇ ಹಂತದ ಕರ್ನಾಟಕ ಚುನಾವಣಾ ಪ್ರಚಾರಾಭಿಯಾನವನ್ನು ಆರಂಭಿಸಲಿದ್ದಾರೆ.

Advertisement

ಮೊದಲೆರಡು ಹಂತಗಳ ಪ್ರಚಾರಾಭಿಯಾನದಲ್ಲಿ ರಾಹುಲ್‌ ಉತ್ತರ ಕರ್ನಾಟಕದ ವಿವಿಧ ಭಾಗಗಳನ್ನು ಸಂದರ್ಶಿಸಿದ್ದರು. ಈಗಿನ್ನು  ಎರಡು ದಿನಗಳ 3ನೇ ಹಂತದಲ್ಲಿ ಅವರು ದಕ್ಷಿಣ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಿಗೆ ಭೇಟಿ ನೀಡುವರು.  

ರಾಹುಲ್‌ ಅವರ ಪ್ರವಾಸ ಪಟ್ಟಿಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಮುಖ್ಯವಾಗಿವೆ. ರಾಹುಲ್‌ ಭೇಟಿ ನೀಡುವ ಧಾರ್ಮಿಕ ಸ್ಥಳಗಳ ಪೈಕಿ ಗೋಕರ್ಣನಾಥೇಶ್ವರ ದೇವಸ್ಥಾನ, ರೊಸಾರಿಯೋ ಚರ್ಚ್‌, ಉಳ್ಳಾಲ ದರ್ಗಾ, ಶೃಂಗೇರಿ ಶಾರದಾಂಬ ದೇವಸ್ಥಾನ ಮತ್ತು ಶೃಂಗೇರಿ ಮಠ ಮುಖ್ಯವಾಗಿವೆ. 

Advertisement

Udayavani is now on Telegram. Click here to join our channel and stay updated with the latest news.

Next