Advertisement
ಜೇವರ್ಗಿ ಪಟ್ಟಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಸುರಿಯುವ ಮಳೆಯ ಮಧ್ಯೆ ಬಿಜೆಪಿ ವಿರುದ್ಧ ಗುಡುಗಿದ ಅವರು, ಕಾಂಗ್ರೆಸ್ ನೀಡಿದಂತೆ ನಮಗೆ ಗ್ಯಾರಂಟಿ ನೀಡುವುದು ಅಸಾಧ್ಯ ಎಂದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಸತ್ಯ. ಶೇ. 40ರಷ್ಟು ಅವರೇ ತಿಂದು ಹಾಕಿದರೆ, ಇನ್ನು ಉಳಿದದ್ದರಲ್ಲಿ ಏನೂ ಮಾಡಲು ಸಾಧ್ಯ ವಿಲ್ಲ. ಅವರು ಸತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದರು.
ಮೂರ್ನಾಲ್ಕು ವರ್ಷಗಳಿಂದ ಬಿಜೆಪಿ ಸರಕಾರ ಸುಳ್ಳು ಹೇಳಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬಿಡುಗಡೆ ಮಾಡಿರುವ 3 ಸಾವಿರ ಕೋಟಿ ರೂ. ಅನುದಾನದಲ್ಲಿ ಶೇ. 12ರಷ್ಟು ಮಾತ್ರವೇ ಖರ್ಚು ಮಾಡಿದೆ. ಇವರಿಂದ ಇನ್ನೆಂತಹ ಅಭಿವೃದ್ಧಿ ನಿರೀಕ್ಷೆ ಮಾಡಬಹುದು? ಇವತ್ತಿನವರೆಗೂ ಬಿಜೆಪಿ ಸರಕಾರಕ್ಕೆ 50 ಸಾವಿರ ಸರಕಾರಿ ನೌಕರಿ ತುಂಬುವುದು ಸಾಧ್ಯವಾಗಿಲ್ಲ. ಇಂತಹ ಭ್ರಷ್ಟ ಮತ್ತು ಅಭಿವೃದ್ಧಿಗೇಡಿ ಸರಕಾರವನ್ನು ಕಿತ್ತೂಗೆಯಲು ಮನಸ್ಸು ಮಾಡಬೇಕು. ಈ ಬಾರಿ ಕಾಂಗ್ರೆಸ್ ಅಧಿ ಕಾರಕ್ಕೆ ಬರುವುದು ಶತಃಸಿದ್ಧ. ಕಾಂಗ್ರೆಸ್ಗೆ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಲಭಿಸಲಿದೆ ಎಂದರು. ನಿಮ್ಮ ಆಶೀರ್ವಾದದಿಂದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದರೆ ಖಾಲಿ ಇರುವ 50 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಐಐಟಿ, ಐಐಎಂ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಕೆಕೆಆರ್ಡಿಬಿಗೆ 5,000 ಕೋಟಿ ರೂ., ಪ್ರತೀ ಗ್ರಾ.ಪಂ.ಗೆ 1 ಕೋಟಿ ರೂ. ಅನುದಾನ ನೀಡಲಾಗುವುದು. ಮಹಿಳೆಯರಿಗೆ ಸರಕಾರಿ ಬಸ್ಗಳಲ್ಲಿ ಓಡಾಡಲು ಉಚಿತ ಪಾಸ್ ನೀಡಲಾಗುವುದು.
– ರಾಹುಲ್ ಗಾಂಧಿ, ಎಐಸಿಸಿ ಮಾಜಿ ಅಧ್ಯಕ್ಷ