ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಬೆಳಗ್ಗೆ ಜಕ್ಕರಾಯನ ಕೆರೆ ಬಳಿ ಸಫಾಯಿ ಕರ್ಮಚಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ವೇಳೆ ರಾಹುಲ್ ಪೆಂಡಾಲ್‌ನಿಂದ ಹೊರ ಬಂದು ಖುರ್ಚಿಯೊಂದನ್ನು ಹಿಡಿದು ರಣಬಿಸಿನಲ್ಲೇ ಕುಳಿತು ಸಂವಾದ ನಡೆಸಿದರು. ಸಿಎಂ ಸಿದ್ದರಾಮಯ್ಯ ಮತ್ತಿತರ ನಾಯಕರು ರಾಹುಲ್ ಅವರನ್ನು ಹಿಂಬಾಲಿಸಿದರು.
1 ಗಂಟೆ ವೇಳೆ ನಿಗದಿಯಾಗಿದ್ದ ಕಾರ್ಯಕ್ರಮವನ್ನು 20 ನಿಮಿಷಕ್ಕೆ ಮೊಟಕು ಗೊಳಿಸಿ ತೆರಳಿರುವ ಬಗ್ಗೆ ತಿಳಿದು ಬಂದಿದ್ದು, ನಾಲ್ಕೈದು ಪ್ರಶ್ನೆಗಳಿಗೆ ಸಂವಾದ ಮುಗಿಸಿ ತೆರಳಿರುವುದಾಗಿ ವರದಿಯಾಗಿದೆ.
ಕಾರ್ಯಕ್ರಮದಲ್ಲಿ 356 ಕಾರ್ಮಿಕರಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು ಮತ್ತು 15 ಜನರಿಗೆ ಪ್ರಶ್ನೆ ಕೇಳುವ ಅವಕಾಶ ನೀಡಲಾಗಿತ್ತು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ನಿಮ್ಮಂತಹ ಬೆವರು ಹರಿಸಿ ದುಡಿಯುವವರಿಗೆ ಸೌಲಭ್ಯ ಕಲ್ಪಿಸುವುದೇ ನಮ್ಮ ಗುರಿ ಎಂದರು.
ರಾಹುಲ್ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಉದ್ಯಮಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.