ಹಾವೇರಿ : ರಾಜಕಾರಣಿಗಳು ಸಾರ್ವಜನಿಕ ಭಾಷಣ ಮಾಡುವಾಗ ಯದ್ವಾತದ್ವಾ ನಾಲಗೆ ಹರಿಬಿಟ್ಟು ಬಾಯಿತಪ್ಪಿ ಎಡವಟ್ಟು ಮಾಡಿಕೊಂಡು ತಮಗೂ ತಮ್ಮ ಪಕ್ಷಕ್ಕೂ ತೀವ್ರ ಮುಖಭಂಗ ಉಂಟು ಮಾಡುವುದು ಹೊಸ ವಿಷಯವೇನೂ ಅಲ್ಲ.
ಇಂದು ಹಾವೇರಿಯಲ್ಲಿ ಲೋಕಸಭಾ ಚುನಾವಣೆ ಪ್ರಚಾರವನ್ನು ಆರಂಭಿಸಲು ನಡೆಸಲಾದ ಜನಪರಿವರ್ತನ ರಾಲಿಯಲ್ಲಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಣಕಹಳೆ ಮೊಳಗಿಸಿದರು.
ಗಾಂಧಿ ಕುಟುಂಬ ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನವನ್ನು ಕೊಂಡಾಡುವ ಭರದಲ್ಲಿ ಕಾಂಗ್ರೆಸ್ ನಾಯಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಈ ಸಮಾರಂಭದಲ್ಲಿ ಈ ಸಮಾರಂಭದಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಬಾಯಿ ತಪ್ಪಿ ಆಡಿದ ಮಾತಿನಿಂದ ಅವರ ಪಕ್ಷಕ್ಕೂ, ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೂ ತೀವ್ರ ಮುಜುಗರ ಉಂಟಾಯಿತು.
ಖಂಡ್ರೆ ಅವರು ತಮ್ಮ ಭಾಷಣದ ಭರಾಟೆಯಲ್ಲಿ, “ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರೆ ಆಧುನಿಕ ಭಾರತದ ರೂವಾರಿ ರಾಹುಲ್ ಗಾಂಧಿ ಅವರು ಉಗ್ರರಿಗೆ ಬಲಿಯಾದರು’ ಎಂದು ಹೇಳಿದರು.
ತಮ್ಮ ಮಾತಿನ ಭರದಲ್ಲಿ ಆದ ಪ್ರಮಾದವನ್ನು ಅರಿತುಕೊಳ್ಳುವ ವೇಳೆಗೆ ಖಂಡ್ರೆ ಅವರ ವಾಕ್ ಚಾತುರ್ಯ – ಮತ್ತು ಅವರ ಪಕ್ಷ ನಾಯಕತ್ವ ತೀವ್ರ ಇರಿಸುಮುರಿಸಿಗೆ ಗುರಿಯಾಗಿತ್ತು !
ಇದೇ ವೇದಿಕೆಯಲ್ಲಿ ರಾಹುಲ್ ಗಾಂಧಿ ಅವರು ಕೇಂದ್ರದಲ್ಲಿನ ಪ್ರಧಾನಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಗುಡುಗುವಾಗ, ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರ ನಾಯಕ ಮೌಲಾನಾ ಮಸೂದ್ ಅಜರ್‌ನನ್ನು ಪಾಕಿಸ್ಥಾನಕ್ಕೆ ಬಿಟ್ಟು ಬಂದವರು ಯಾರು ? ಎಂದು ಪ್ರಶ್ನಿಸಿದರು.
ದೇಶದ ಚೌಕೀದಾರ ತಾನೆಂದು ಹೇಳಿಕೊಳ್ಳುತ್ತಿರುವ ಪ್ರಧಾನಿ ಮೋದಿ ಜೀ ಅವರು ನಿಜಕ್ಕಾದರೆ ಅನಿಲ್ ಅಂಬಾನಿ ಮುಂತಾದ ಉದ್ಯಮಿಗಳ ಚೌಕೀದಾರ ಎಂದು ರಾಹುಲ್ ಲೇವಡಿ ಮಾಡಿದರು.