Advertisement

ವಿಳಾಸಕ್ಕಿಲ್ಲ ಪಾನ್ಪೋರ್ಟ್‌: ರಾಹುಲ್‌ ಕಿಡಿ

06:35 AM Jan 15, 2018 | Harsha Rao |

ಹೊಸದಿಲ್ಲಿ: ಪಾಸ್‌ಪೋರ್ಟ್‌ಗಳನ್ನು ಇನ್ನು ಮುಂದೆ ವಿಳಾಸ ದೃಢೀಕರಣ ದಾಖಲೆಯೆಂದು ಪರಿಗಣಿಸಲಾಗದು ಎಂಬ ಕೇಂದ್ರ ಸರಕಾರದ ಆದೇಶದ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ. ಈ ನಿರ್ಧಾರವು ಆಡಳಿತಾರೂಢ ಪಕ್ಷದ ತಾರತಮ್ಯ ಮನಃಸ್ಥಿತಿಯನ್ನು ತೋರಿಸುತ್ತಿದೆ ಎಂದಿದ್ದಾರೆ. ಅಲ್ಲದೆ, ಭಾರತದ ವಲಸೆ ಕಾರ್ಮಿಕರನ್ನು ಸರಕಾರವು ಎರಡನೇ ದರ್ಜೆಯ ನಾಗರಿಕರಂತೆ ನೋಡುತ್ತಿದೆ. ಇದನ್ನು ಒಪ್ಪಲಾಗದು ಎಂದೂ ರಾಹುಲ್‌ ಹೇಳಿದ್ದಾರೆ. ಮತ್ತೂಂದು ಬೆಳವಣಿಗೆಯಲ್ಲಿ, ಬೇರೆ ದೇಶಗಳಲ್ಲಿ ಆಶ್ರಯ ಬಯಸಿದರು ಎಂಬ ಕಾರಣಕ್ಕಾಗಿ ಭಾರತೀಯ ನಾಗರಿಕರಿಗೆ ಪಾನ್ಪೋರ್ಟ್‌ ನಿರಾಕರಿಸ ಬಾರದು ಎಂದು ಪ್ರಕರಣವೊಂದರ ವಿಚಾರಣೆ ವೇಳೆ ದಿಲ್ಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next