Advertisement

ಅಧ್ಯಕ್ಷ ಸ್ಥಾನದಿಂದ ರಾಹುಲ್‌ ಕೆಳಗಿಳಿಸಿ

06:10 AM Feb 21, 2018 | Team Udayavani |

ವಿಧಾನಪರಿಷತ್ತು: ಕಾಂಗ್ರೆಸ್‌ ಪಕ್ಷಕ್ಕೆ ಒಳ್ಳೆಯದಾಗಬೇಕು, ರಾಜ್ಯದಲ್ಲಿ ಮತ್ತೇ ಅಧಿಕಾರಕ್ಕೆ ಬರಬೇಕು ಎಂದಾದರೆ ರಾಹುಲ್‌ ಗಾಂಧೀಯವರನ್ನು ತಕ್ಷಣ ಎಐಸಿಸಿ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿ ಎಂದು ಬಿಜೆಪಿ ಸದಸ್ಯ ಲೇಹರ್‌ ಸಿಂಗ್‌ ನೀಡಿದ ಸಲಹೆ ಸದನದಲ್ಲಿ ಮಾತಿನ ಚಕಮಕಿಗೆ ಕಾರಣವಾಯಿತು.

Advertisement

ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸಿಸುವ ಪ್ರಸ್ತಾಪದ ಮೇಲೆ ಮಾತನಾಡುತ್ತ, ನಾನು ವಿಧಾನಪರಿಷತ್‌ ಸದಸ್ಯನಾಗಲು ಕಾಂಗ್ರೆಸ್‌ ಪಕ್ಷದ ಕೊಡುಗೆಯೂ ಇದೆ. ಅದನ್ನು ನೆನಪಿನಲ್ಲಿಟ್ಟುಕೊಂಡು ಪಕ್ಷ ಮತ್ತು ದೇಶದ ಹಿತದೃಷ್ಟಿಯಿಂದ ಎರಡು ಸಲಹೆಗಳನ್ನು ನೀಡುತ್ತಿದ್ದೇನೆ. ಇದರಲ್ಲಿ ಮೊದಲ ಸಲಹೆ ಏನೆಂದರೆ, ಕಾಂಗ್ರೆಸ್‌ ಪಕ್ಷಕ್ಕೆ ಕರ್ನಾಟಕ ಕೊನೆಯ ಅವಕಾಶ, ಇಲ್ಲಿ ಮತ್ತೇ ಅಧಿಕಾರಕ್ಕೆ ಬರಬೇಕಾದರೆ ರಾಹುಲ್‌ ಗಾಂಧಿಯವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿ, ಏಕೆಂದರೆ ಅವರು ಅಧ್ಯಕ್ಷರಾಗಲು ಅಸಮರ್ಥರು, ಅವರ ಬದಲಿಗೆ ಕೃಷ್ಣಭೈರೇಗೌಡರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಎಷ್ಟೋ ಉತ್ತಮವಾಗುತ್ತದೆ ಎಂದರು.

ಲೇಹರ್‌ಸಿಂಗ್‌ ಸಲಹೆಯಿಂದ ಸಿಟ್ಟಿಗೆದ್ದ ಕಾಂಗ್ರೆಸ್‌ ಸದಸ್ಯರು ಅವರ ಮೇಲೆ ಮುಗಿಬಿದ್ದರು, ಪಕ್ಷದ ಅಧ್ಯಕ್ಷರ ವಿಚಾರದಲ್ಲಿ ಸಲಹೆ ಕೊಡಲು ನಿವ್ಯಾರು. ಪಕ್ಷ ನಡೆಸುವ ಬಗ್ಗೆ ನಿಮ್ಮ ಸಲಹೆ ನಮಗೆ ಬೇಕಿಲ್ಲ. ಈ ವಿಚಾರದಲ್ಲಿ ನಾವು ಸಮರ್ಥರಾಗಿದ್ದೇವೆ. ನಿಮ್ಮ ಪಕ್ಷದ ವಿಚಾರ ಮೊದಲು ನೋಡಿಕೊಳ್ಳಿ, ನಮ್ಮ ಪಕ್ಷದ ಅಧ್ಯಕ್ಷರ ಬಗ್ಗೆ ಮಾತನಾಡುವುದು ಬಿಟ್ಟು ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿ, ಮಾತನಾಡುವಾಗ ಸಂಸದೀಯ ನಡವಳಿಕೆಯ ಮಿತಿಯಲ್ಲಿರಿ ಎಂದು ಸಭಾನಾಯಕ ಎಂ.ಆರ್‌. ಸೀತಾರಾಂ, ಸಚಿವ ಕೃಷ್ಣಭೈರೇಗೌಡ, ಸದಸ್ಯರಾದ ಐನಾವ್‌ ಡಿಸೋಜಾ, ಶರಣಪ್ಪ ಮಟ್ಟೂರು ತಿರುಗೇಟು ನೀಡಿದರು.

ಈ ವೇಳೆ ಲೇಹರ್‌ಸಿಂಗ್‌ ಮತ್ತೇ ರಾಹುಲ್‌ ಗಾಂಧಿ ಹೆಸರು ಪ್ರಸ್ತಾಪಿಸಿ, ನಾನು ಕಾಂಗ್ರೆಸ್‌ ಪಕ್ಷದ ಹಿತದೃಷ್ಟಿಯಿಂದ ಸಲಹೆ ನೀಡುತ್ತಿದ್ದೇನೆ. ಸಿಟ್ಟು ಬಿಟ್ಟು ಸಮಾಧಾನದಿಂದ ಕೇಳಿ. ರಾಹುಲ್‌ಗಾಂಧಿ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಮುಂದೆ ಏನಾಗುತ್ತೋ ಗೊತ್ತಿಲ್ಲ. ಏನಾದರೂ ಹೆಚ್ಚು ಕಡಿಮೆ ಆದರೆ ಪಕ್ಷದ ಗತಿ ಏನು. ಆ ಕಾರಣಕ್ಕಾಗಿ ನಾನು ಹೇಳುತ್ತಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next