Advertisement

ರಾಹುಲ್‌, ಪ್ರಿಯಾಂಕಾ ವಾದ್ರಾ ವಿರುದ್ಧ ಭೂ ಅಕ್ರಮ ಆರೋಪ

12:30 AM Mar 14, 2019 | Team Udayavani |

ಹೊಸದಿಲ್ಲಿ: ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಉದ್ಯಮಿ ಎಚ್‌.ಎಲ್‌ ಪಹ್ವಾರಿಂದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭೂಮಿ ಖರೀದಿಸಿ ಅದನ್ನು ಪ್ರಿಯಾಂಕಾ ವಾದ್ರಾಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಆರೋಪಿಸಿದ್ದಾರೆ. 

Advertisement

ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖೀಸಿ ಈ ಆರೋಪ ಮಾಡಿ ರುವ ಅವರು, ಪ್ರಿಯಾಂಕಾ ಪತಿ ರಾಬರ್ಟ್‌ ವಾದ್ರಾ ಅವರೊಂದಿಗೆ ವ್ಯಾವ ಹಾರಿಕ ಸಂಬಂಧ ಹೊಂದಿರುವ ಪಾಹ್ವಾ ಮತ್ತು ಮಹೇಶ್‌ ಕುಮಾರ್‌ ನಗರ್‌ರಿಂದ ರಾಹುಲ್‌ ಭೂಮಿ ಖರೀದಿಸಿದ್ದಾರೆ. ಈ ಖರೀದಿಗೆ ಸಿ.ಸಿ. ಥಂಪಿ ಎಂಬುವವರು ಹಣ ನೀಡಿದ್ದಾರೆ. ವಿವಾದಿತ ಶಸ್ತ್ರಾಸ್ತ್ರ ಡೀಲರ್‌ ಸಂಜಯ್‌ ಭಂಡಾರಿ ಹಾಗೂ ಥಂಪಿ ಮಧ್ಯೆ ಸ್ನೇಹವಿದೆ ಎಂದು ಆರೋಪಿಸಲಾಗಿದೆ. ಇದೊಂದು ಭ್ರಷ್ಟ ಜಾಲ ಎಂದೂ ಅವರು ಹೇಳಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್‌ ಸುಜೇìವಾಲ, ಇದರಲ್ಲಿ ಹಗರಣ ನಡೆದಿದ್ದರೆ ಏಕೆ ಈ ಐದು ವರ್ಷಗಳ ಬಿಜೆಪಿ ಆಡಳಿತದಲ್ಲಿ ತನಿಖೆ ನಡೆಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿ ಯಿಂದ ಬಿಜೆಪಿ ಇಂತಹ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದೆ ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next