Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದು,ಪಕ್ಷದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಕಲಬುರಗಿ ಭೇಟಿ ವೇಳೆ ಅವರು ನೀಡಿದ ಭರವಸೆಯಂತೆ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕೊಡುಗೆ ನೀಡಿದ್ದಾರೆ.
Related Articles
Advertisement
ಮಾಜಿ ಶಾಸಕರಾದ ಸೈಯದ್ ಯಾಸೀನ್, ರಾಜಾ ರಾಯಪ್ಪ ನಾಯಕ, ರಾಮಣ್ಣ ಇರಬಗೇರಾ, ಅಬ್ದುಲ್ ಕರೀಂ, ಅಮರೇಗೌಡ ಹಂಚಿನಾಳ, ಪಾರಸಮಲ್ ಸುಖಾಣಿ, ಕೆ.ಶಾಂತಪ್ಪ, ರುದ್ರಪ್ಪ ಅಂಗಡಿ, ಶಿವಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.
ಗೊರೇಬಾಳ: ರಾಯಚೂರ-ಗಂಗಾವತಿ ಮಾರ್ಗದ ಶಾಂತಿನಗರ (ಹಂಚಿನಾಳ ಕ್ಯಾಂಪ್) ಗ್ರಾಮದ ಮಾರ್ಗವಾಗಿ ಫೆ.11ಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು ಆಗಮನದ ನಿಮಿತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಟೋಲ್‌ಗೇಟ್ ಸಿಬ್ಬಂದಿಗಳ ರಾಜ್ಯ ಹೆದ್ದಾರಿ ರಸ್ತೆಯ ವಿವಿಧ ಗ್ರಾಮಗಳ ಬಸ್ ನಿಲ್ದಾಣದ ಮುಂಭಾಗದ ರಸ್ತೆಗಳಲ್ಲಿ ಸ್ವತ್ಛತಾ ಕಾರ್ಯ ಕೈಗೊಂಡಿದ್ದಾರೆ. ಇನ್ನು ಸಿಂಧನೂರಿನವರೆಗೆ ತೆರಳುವ ರಸ್ತೆ ಮಾರ್ಗದಲ್ಲಿ ಹೆಚ್ಚು ಮಣ್ಣು ಸಂಗ್ರಹಗೊಂಡು ಧೂಳು ಹೆಚ್ಚಾದ ಕಾರಣ ಮಣ್ಣು ತೆಗೆಯುವ ಕೆಲಸ ಭರದಿಂದ ಸಾಗಿದೆ.
ನಾಳೆ ರಾಹುಲ್ ಗಾಂಧಿ ಆಗಮನ: ಸಿದ್ಧತೆ ಪರಿಶೀಲನೆ ಸಿಂಧನೂರು: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಫೆ.11ರಂದು ನಗರಕ್ಕೆ ಆಗಮಿಸಲಿದ್ದು, ಯುವಕರು ಹಾಗೂ ರೈತ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಹೊನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಅವರು ಸಿದ್ಧತೆಗಳನ್ನು ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ರಾಷ್ಟ್ರೀಯ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಬರುತ್ತಿದ್ದು, ಸ್ವಾಗತಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಭೇಟಿ ಅತ್ಯಂತ ಪ್ರಮುಖವಾಗಿದೆ. ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ, ಲೋಕಸಭಾ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ರೈತ ಮುಖಂಡರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಕಿಸಾನ್ ವಿಭಾಗದ ರಾಜ್ಯಾಧ್ಯಕ್ಷ ಸಚಿನ್ ಮಿಗ, ಜಿಲ್ಲಾಧ್ಯಕ್ಷ ಜಿ.ರಮೇಶ ಯಾದವ್ ಸೇರಿದಂತೆ ಅನೇಕರು ಇದ್ದರು.
ಕಾಂಗ್ರೆಸ್ ಜಿಲ್ಲಾ ಘಟಕದಲ್ಲಿ ಸಣ್ಣ-ಪುಟ್ಟ ವೈಮನಸ್ಸುಗಳಿವೆ. ಹಾಗಂತ ಅದನ್ನೆಲ್ಲ ರಾಹುಲ್ ಗಾಂಧಿ ಬಂದು ಇತ್ಯರ್ಥಗೊಳಿಸಬೇಕು ಎಂದೆನಿಲ್ಲ. ನಾವೆ ಪರಸ್ಪರ ಚರ್ಚಿಸಿ ಬಗೆ ಹರಿಸಿಕೊಳ್ಳುತ್ತೇವೆ. ನಗರ ಕ್ಷೇತ್ರ ಸಾಮಾನ್ಯಕ್ಕೆ ಮೀಸಲಾಗಿದ್ದು, ಟಿಕೆಟ್‌ಗಾಗಿ ಪೈಪೋಟಿ ಇರುವುದು ಸಹಜ. ಆದರೆ, ಯಾರಿಗೆ ಟಿಕೆಟ್ ಕೊಡಬೇಕು ಎಂಬುದು ವರಿಷ್ಠರಿಗೆ ಬಿಟ್ಟ ವಿಚಾರ. ಬಿ.ವಿ.ನಾಯಕ, ಸಂಸದ