Advertisement

“ರಾಹುಲ್‌ ಜಿನ್ನಾ’ಹೆಸರೇ ಹೆಚ್ಚು ಸೂಕ್ತ! ಕೈ ನಾಯಕನಿಗೆ ಬಿಜೆಪಿ ತಿರುಗೇಟು

10:13 AM Dec 16, 2019 | Team Udayavani |

ನವದೆಹಲಿ: ಅತ್ಯಾಚಾರ ಪ್ರಕರಣಗಳನ್ನು ಖಂಡಿಸುವ ಭರದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಮೇಕ್‌ ಇನ್‌ ಇಂಡಿಯಾ’ವನ್ನು “ರೇಪ್‌ ಇನ್‌ ಇಂಡಿಯಾ’ ಎಂದು ಹೇಳಿ ವಿವಾದಕ್ಕೀ ಡಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಬಿಜೆಪಿ ತಿರುಗೇಟು ನೀಡಿದೆ. “ರಾಹುಲ್‌ ಹೆಸರಿನ ಜೊತೆಗೆ ಸಾವರ್ಕರ್‌ ಹೆಸರು ಸೂಕ್ತವಾಗಿಲ್ಲ.

Advertisement

ಯಾವಾಗಲೂ ಮುಸ್ಲಿಮರ ಪರವಾಗಿಯೇ ಮಾತನಾಡು ವುದರಿಂದ ಅವರಿಗೆ “ರಾಹುಲ್‌ ಜಿನ್ನಾ’ ಎನ್ನುವುದೇ ಹೆಚ್ಚು ಸೂಕ್ತ’ ಎಂದು ಹೇಳಿದೆ.
“ರೇಪ್‌ ಇನ್‌ ಇಂಡಿಯಾ’ ಹೇಳಿಕೆಗೆ ಗುರುವಾರ ರಾಜಕೀಯ ವಲಯದಿಂದ ಕ್ಷಮೆ ಕೇಳುವಂತೆ ಆಗ್ರಹ ಕೇಳಿಬಂದ ಹಿನ್ನೆಲೆಯಲ್ಲಿ ಶುಕ್ರವಾರ, ನವದೆಹಲಿಯಲ್ಲಿ ಕಾಂಗ್ರೆಸ್‌ ವತಿಯಿಂದ ಆಯೋಜಿಸಲಾಗಿದ್ದ ಭಾರತ್‌ ಬಚಾವೊ ರ್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್‌, “”ಕ್ಷಮೆ ಕೋರಲು ನಾನು ರಾಹುಲ್‌ ಸಾವರ್ಕರ್‌ ಅಲ್ಲ, ರಾಹುಲ್‌ ಗಾಂಧಿ” ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಜಿ.ವಿ.ಎಲ್‌. ನರಸಿಂಹ ರಾವ್‌, “”ರಾಹುಲ್‌ರನ್ನು “ರಾಹುಲ್‌ ಜಿನ್ನಾ’ ಎಂದು ಕರೆಯು ವುದೇ ಸರಿ. ವಿಪಕ್ಷಗಳು, ಸಾವರ್ಕರ್‌ ಅವರು ತಮ್ಮ ಸ್ವಾತಂತ್ರ್ಯ ಹೋರಾಟದ ಬಗ್ಗೆ ಬ್ರಿಟಿಷ್‌ ಸರ್ಕಾರದ ಕ್ಷಮೆ ಕೋರಿ, ಜೈಲಿನಿಂದ ಬಿಡುಗಡೆಯಾದರು ಎನ್ನುತ್ತವೆ. ಇದು ಸಾರ್ವಕರ್‌ ಅವರ ದೇಶಪ್ರೇಮಕ್ಕೆ ಮಸಿ ಬಳಿಯುವ ಪ್ರಯತ್ನ” ಎಂದಿದ್ದಾರೆ.

ಬಿಜೆಪಿಯ ಇನ್ನೊಬ ವಕ್ತಾರ ಸಂಬಿತ್‌ ಪಾತ್ರಾ “”ರಾಹುಲ್‌ ಎಂದಿಗೂ ಸಾವರ್ಕರ್‌ ಆಗಲು ಸಾಧ್ಯವಿಲ್ಲ” ಎಂದಿದ್ದಾರೆ.

ಕೊನೇ ಉಸಿರಿನವರೆಗೂ ಹೋರಾಟ: ಸೋನಿಯಾ: “ದೇಶದಲ್ಲಿ ಈಗ ಭಯ ಭೀತಿಯ ವಾತಾವರಣ ಉಂಟಾಗಿದ್ದು, ದೇಶ ಮುನ್ನಸುವ ನಾಯಕನೇ ಗೊಂದಲ ದಲ್ಲಿದ್ದಾರೆ. ಕೇಂದ್ರ ಸರ್ಕಾರದ ಅಕ್ರಮಗಳ ವಿರುದ್ಧ ಕಾಂಗ್ರೆಸ್‌ ತನ್ನ ಕೊನೆಯ ಉಸಿರಿನವರೆಗೂ ಹೋರಾಡುತ್ತದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್‌ ವತಿಯಿಂದ ಆಯೋಜಿಸಲಾಗಿದ್ದ “ಭಾರತ್‌ ಬಚಾವೊ’ ರ್ಯಾಲಿಯಲ್ಲಿ ಮಾತನಾಡಿದ ಅವರು, ಪರಿಷ್ಕರಣೆಗೊಂಡಿರುವ ಪೌರತ್ವ ನಿಷೇಧ ಕಾಯ್ದೆ ಯಿಂದ ಭಾರತದ ಆತ್ಮವೇ ಸತ್ತಂತಾಗಿದೆ ಎಂದರು.

Advertisement

“”ಪ್ರಧಾನಿ ಮೋದಿ, ಅಮಿತ್‌ ಅವರು ದೇಶದ ಸಂವಿಧಾನ, ಸಂಸ್ಥೆಗಳ ಬಗ್ಗೆ ಯಾವುದೇ ಕಳಕಳಿ ಹೊಂದಿಲ್ಲ. ನೈಜತೆ ಯನ್ನು ಮರೆಮಾಚಿ, ಜನರನ್ನು ಸಂಘ ರ್ಷಕ್ಕೆ ಇಳಿಸುವುದೇ ಅವರ ಆಡಳಿತದ ಮೂಲಮಂತ್ರವಾಗಿದೆ.

ಸಂವಿಧಾನದ ಧ್ಯೇಯೋದ್ದೇಶಗಳನ್ನು ಹಾಳುಗೆಡವುತ್ತಿ ರುವ ಅವರೇ ಸಂವಿಧಾನ ದಿನಾಚರಣೆ ಆಚರಿಸುತ್ತಾರೆ. ಎಲ್ಲೆಡೆಯ ಜನತೆ “ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಎಲ್ಲಿದೆ ಎಂದು ಕೇಳುವಂತಾಗಿದೆ” ಎಂದರು.

ಶಿವಸೇನೆ ಎಚ್ಚರಿಕೆ
ರಾಹುಲ್‌ ಹೇಳಿಕೆಯನ್ನು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಜೊತೆಗೆ ಸಮ್ಮಿಶ್ರ ಸರ್ಕಾರ ರಚಿಸಿರುವ ಶಿವಸೇನೆಯ ನಾಯಕ ಸಂಜಯ್‌ ರಾವತ್‌ ಟೀಕಿಸಿದ್ದು, ಸಾವರ್ಕರ್‌ ವಿರುದ್ಧದ ಯಾವುದೇ ರೀತಿಯ ಟೀಕೆಗಳು ಸಲ್ಲದು ಎಂದು ಖಡಕ್ಕಾಗಿ ಎಚ್ಚರಿಸಿದ್ದಾರೆ. “”35 ವರ್ಷಗಳ ಬಿಜೆಪಿ ಸಾಂಗತ್ಯ ತೊರೆದಿದ್ದರೂ, ಸಾವರ್ಕರ್‌ ಬಗ್ಗೆ ಪಕ್ಷ ಹೊಂದಿರುವ ಗೌರವದಲ್ಲಿ ಯಾವುದೇ ಬದಲಾವಣೆಯಿಲ್ಲ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next