Advertisement

“ರಾಹುಲ್‌ ಪ್ರಶ್ನೆಗೆ ಉತ್ತರಿಸಲು ಭಯವೇಕೆ?’; ಸಿದ್ದರಾಮಯ್ಯ

12:32 AM Mar 26, 2023 | Team Udayavani |

ಬೆಂಗಳೂರು: ಸರ್ವಶಕ್ತ ಪ್ರಧಾನ ಮಂತ್ರಿ ಎಂದು ಬೆಂಬಲಿಗರಿಂದ ಬಹುಪರಾಕ್‌ ಹಾಕಿಸಿಕೊಳ್ಳುತ್ತಿರುವ ನರೇಂದ್ರ ಮೋದಿ ಅವರೇ, ಗೌತಮ್‌ ಅದಾನಿ ಎಂಬ ಉದ್ಯಮಿ ಬಗ್ಗೆ ಮಾತನಾಡಲು ನಿಮಗೆ ಮುಜುಗರ ಏಕೆ? ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಪ್ರಶ್ನೆಗಳಿಗೆ ಉತ್ತರಿಸಲು ಭಯವೇಕೆ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Advertisement

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, 2014ರಲ್ಲಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 609ನೇ ಸ್ಥಾನದಲ್ಲಿದ್ದ ಗೌತಮ್‌ ಅದಾನಿ ಅವರು 2022 ರಲ್ಲಿ 3ನೇ ಸ್ಥಾನಕ್ಕೆ ಏರಿದ್ದು ಹೇಗೆ, 2014 ರಲ್ಲಿ 8 ಬಿಲಿಯನ್‌ ಡಾಲರ್‌ ಸಂಪತ್ತಿನ ಗೌತಮ್‌ ಅದಾನಿ ಅವರು 2022 ರಲ್ಲಿ 140 ಬಿಲಿಯನ್‌ ಡಾಲರ್‌ ಧನಿಕ ಹೇಗಾದರು ಎಂದು ಕೇಳಿದ್ದಾರೆ.
ನಿಮ್ಮ ಜತೆ ಪ್ರಯಾಣದಲ್ಲಿದ್ದ ಉದ್ಯಮಿಗಳು ಯಾರು?

ನಿಮ್ಮ ವಿದೇಶ ಪ್ರವಾಸದಲ್ಲಿ ಎಷ್ಟು ಬಾರಿ ಗೌತಮ್‌ ಅದಾನಿ ನಿಮ್ಮ ಜತೆಗಿದ್ದರು. ಎಷ್ಟು ಬಾರಿ ವಿದೇಶದಲ್ಲಿ ನಿಮಗೆ ಜತೆಯಾ ದರು, ಅವರು ಯಾವ ಉದ್ಯಮಿಗಳ ನಿಯೋಗದಲ್ಲಿದ್ದರು. ಈ ಪ್ರವಾಸದ ಸಮಯ ದಲ್ಲಿ ನಿಮ್ಮ ಜತೆ ಇದ್ದ ಇತರೆ ಉದ್ಯಮಿಗಳು ಯಾರು ಹೇಳಿ ಎಂದು ಪ್ರಶ್ನಿಸಿದ್ದಾರೆ.

ಷೇರು ವಿಕ್ರಯ ಮಾಡಿರುವುದು ನಿಜವೇ?
ದೇಶದ ಆರು ವಿಮಾನ ನಿಲ್ದಾಣಗಳನ್ನು ಗೌತಮ್‌ ಅದಾನಿ ಸಂಸ್ಥೆ ತಮ್ಮ ವಶಕ್ಕೆ ತೆಗೆದುಕೊಳ್ಳಲು ಕೇಂದ್ರ ಸರಕಾರದ ನಿಯ  ಮಾವಳಿಗಳಲ್ಲಿ ಮಾಡಿರುವ ಬದಲಾವಣೆ ಕಾರಣವೇ? ಕೆಲವು ವಿಮಾನ ನಿಲ್ದಾಣಗಳ ಮಾಲಕರು ತನಿಖಾ ಸಂಸ್ಥೆಗಳಿಗೆ ಹೆದರಿ ಷೇರು ವಿಕ್ರಯ ಮಾಡಿರುವುದು ನಿಜವೇ? ಗೌತಮ್‌ ಅದಾನಿ ಶೆಲ್‌ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಸುಮಾರು 20 ಸಾವಿರ ಕೋಟಿ ರೂ. ಯಾರದ್ದು, ಈ ಬಗ್ಗೆ ಇಡಿಗೆ ಏನಾದರೂ ಮಾಹಿತಿ ಇದೆಯೇ. ಈ ಶೆಲ್‌ ಕಂಪನಿಗಳಿಗೂ ಗೌತಮ್‌ ಅದಾನಿ ಅವರ ಸಹೋದರ ವಿನೋದ್‌ ಅದಾ ನಿಯವರಿಗೂ ಏನು ಸಂಬಂಧ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ರಾಹುಲ್‌ ಗಾಂಧಿಗೆ ಯಾರೂ ಹೆದರಿಸಲಿಕ್ಕಾಗಲ್ಲ, ನಾವೆಲ್ಲ ಅವರ ಜತೆಗಿದ್ದೇವೆ, ಇಡೀ ದೇಶ ಇಂದು ನಮ್ಮೊಂದಿಗಿದೆ. ಬಿಜೆಪಿಯವರು ಕುತಂತ್ರದಿಂದ ರಾಹುಲ್‌ ಗಾಂಧಿ ಗೆ ಸಂಸತ್ತಿನಲ್ಲಿ ಬರಲು ತಡೆಯೊಡ್ಡುತ್ತಿ ದ್ದಾರೆ. ಅದಕ್ಕೆ ನಾವು ಹೆದರಲ್ಲ ನಾವು ಹೋರಾಟ ಮಾಡ್ತೇವೆ.
-ಡಾ|ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next