Advertisement

ನಾಳೆ ದೇವರನಾಡಿನಲ್ಲಿ ರಾಹುಲ್‌ ಅದೃಷ್ಟ ಪರೀಕ್ಷೆ

09:20 AM Apr 23, 2019 | Team Udayavani |

ರಾಹುಲ್‌ ಗಾಂಧಿ ಅವರ ದಕ್ಷಿಣ ಭಾರತದ ರಾಜಕೀಯ ಪ್ರವೇಶಕ್ಕೆ ಎ. 23ರಂದು ಚುನಾವಣೆ ನಡೆಯಲಿದೆ. ರಾಹುಲ್‌ ವಯನಾಡ್‌ನಿಂದ ಸ್ಪರ್ಧಿಸುವುದು ಬಹಿರಂಗಗೊಳ್ಳುತ್ತಿದ್ದಂತೆ ಕ್ಷೇತ್ರದ ಜನ ಸಂಭ್ರಮಾಚರಿಸಿದ್ದರು. ವಯನಾಡ್‌ ಜಿಲ್ಲೆಯ ಜತೆ ಹೊಂದಿಕೊಂಡಿರುವ ಜಿಲ್ಲೆಯಲ್ಲೂ ರಾಹುಲ್‌ ಗಾಂಧಿ ಪರವಾದ ಅಲೆ ಎದ್ದಿದೆ. ಇದರಿಂದ ರಾಹುಲ್‌ ಸ್ಪರ್ಧೆ ರಾಜ್ಯದ ಉಳಿದ ಲೋಕಸಭಾ ಕ್ಷೇತ್ರಗಳ ಮೇಲೂ ನೇರ ಪರಿಣಾಮ ಬೀರಿದೆ. ಇದು ಪಕ್ಷದ ಮತಗಳಿಕೆ ಪ್ರಮಾಣವನ್ನು ಹೆಚ್ಚಿಸಲಿದೆ.

Advertisement

ರಾಹುಲ್‌ ನಾಮಪತ್ರ ಸಲ್ಲಿಸುವ ದಿನ ಹಾಗೂ ರ್ಯಾಲಿಯ ಸಂದರ್ಭ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು, ರಾಜ್ಯ ನಾಯಕರ ಒತ್ತಡವನ್ನು ತುಸು ತಣಿಸಿತ್ತು.

ಎಲ್‌ಡಿಎಫ್ಗೆ ಕ್ಷೇತ್ರ ಗಳಿಸುವ ಉತ್ಸಾಹ
ಆಡಳಿತರೂಢ ಲೆಫ್ಟ್ ಡೆಮಾಕ್ರೆಟಿಕ್‌ ಫ್ರಂಟ್‌ (ಎಲ್‌ಡಿಎಫ್) ವಯನಾಡ್‌ ಕ್ಷೇತ್ರವನ್ನು ಗಳಿಸಿಕೊಳ್ಳುವ ಉತ್ಸಾಹದಲ್ಲಿತ್ತು. ಆದರೆ ರಾಹುಲ್‌ ಸ್ಪರ್ಧೆಯ ವಿಚಾರ ತಿಳಿದ ಬಳಿಕ ಆರಂಭದ ಹುಮ್ಮಸ್ಸು ಸ್ಪಲ್ಪ ಮರೆಯಾಗಿದೆ. ಪಕ್ಷದ ಮೂಲಗಳ ಪ್ರಕಾರ ಕಳೆದ ಬಾರಿ 20,870 ಮತಗಳಿಗೆ ಸೋತಿರುವ ಸಿಪಿಐ ಅಭ್ಯರ್ಥಿ, ಈ ಭಾರಿ ಆ ಮತಗಳನ್ನು ಹೆಚ್ಚಿಸುವತ್ತ ಕಾರ್ಯ ತಂತ್ರ ಮಾಡಿ ಕೊಂಡಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿಗೆ ಅಮೇಠಿಯಲ್ಲಿ ಗೆಲುವಿನ ನಿರೀಕ್ಷೆ
ರಾಹುಲ್‌ ವಯನಾಡ್‌ ಸ್ಪರ್ಧೆ ಪರೋಕ್ಷವಾಗಿ ಬಿಜೆಪಿಗೆ ಅಮೇಠಿಯಲ್ಲಿ ಗೆಲ್ಲುವ ಉತ್ಸಾಹ ಹೆಚ್ಚಿ ಸಿದೆ. ಕಳೆದ ಬಾರಿ ಸೋತಿದ್ದ, ಕೇಂದ್ರ ಸಚಿವೆ ಸ್ಮತಿ ಇರಾನಿ ಈ ಬಾರಿ ಕ್ಷೇತ್ರವನ್ನು ಗೆಲ್ಲುವ ಉತ್ಸಾ ಹದ ಲ್ಲಿದ್ದಾರೆ. ಅಮೇಠಿಯ ಜನರಲ್ಲಿ ರಾಹುಲ್‌ಗೆ ವಿಶ್ವಾಸ ಇಲ್ಲ, ಕ್ಷೇತ್ರ ಜನರಿಗೆ ರಾಹುಲ್‌ ಮೋಸ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ. ಒಟ್ಟಾರೆಯಾಗಿ ವಯನಾಡಿನಲ್ಲಿ ಬಿಜೆಪಿ ಹೆಚ್ಚು ಎಂದರೆ ಮತ ಪ್ರಮಾಣವನ್ನು ಹೆಚ್ಚಿಸಬಹುದೇ ಹೊರತು ಗೆಲುವು ಕೇರಳದಲ್ಲಿ ಕಷ್ಟ ಎಂಬ ವಿಚಾರ ಕೇಸರಿ ನಾಯಕರಿಗೂ ತಿಳಿದಿದೆ. ವಯನಾಡ್‌ ಕ್ಷೇತ್ರವನ್ನು ಉದಾಹರಿಸಿ ಬಿಜೆಪಿ ಅಮೇಠಿಯಲ್ಲಿ ಮತಯಾಚಿಸುತ್ತಿದೆ.

ಬಿಜೆಪಿ ಲೆಕ್ಕಾಚಾರವೇನಾಗಿತ್ತು?
ಅತೀ ಹೆಚ್ಚು ಹಿಂದೂ ಮತಗಳು ಕೇಂದ್ರಿತವಾಗಿರುವ ವಯ ನಾಡಿನಲ್ಲಿ ಬಿಜೆಪಿ ಹಿಂದೂ ಅಜೆಂಡಾದ ಮೂಲಕ ಗೆಲುವು ಸಾಧಿಸುವ ಆಸೆ ಹೊಂದಿದೆ. ಆದರೆ ಕೇರಳದಲ್ಲಿ ಹಿಂದೂ ಮತಗಳು ಸಿಪಿಐ ಮತ್ತು ಕಾಂಗ್ರೆಸ್‌ ನಡುವೆ ಹಂಚಿಕೆಯಾಗು ತ್ತಿದ್ದು, ಇದು ಬಿಜೆಪಿಯ ಕೇಂದ್ರ ನಾಯಕರ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿದೆ.

Advertisement

ವಯನಾಡಿನಲ್ಲಿ ರಾಹುಲ್‌ ಹವಾ
ಕ್ಷೇತ್ರದಲ್ಲಿ ರಾಹುಲ್‌ ಹವಾ ಇದೆ. ವಯನಾಡ್‌ ಕುರಿತಂತೆ ಸಾಮಾಜಿಕ ಜಾಲತಾಣದಲ್ಲೂ ಬೆಂಬಲ ವ್ಯಕ್ತವಾಗುತ್ತಿದೆ. ಅಭಿಮಾನಿಗಳ ವ್ಯಾಟ್ಸಾéಪ್‌ ಡಿಪಿ, ಸ್ಟೇಟಸ್‌ಗಳಲ್ಲಿ ರಾಹುಲ್‌ ಗಾಂಧಿ ಚಿತ್ರಗಳೇ ಸದ್ದುಮಾಡುತ್ತಿವೆ.

ಗೆಲುವಿಗಿಂತ ಅಂತರ ಮುಖ್ಯ!
ರಾಹುಲ್‌ ಗಾಂಧಿ ಅವರೇ ನಮ್ಮ ಎಂಪಿ ಎಂದು ಜನರು ಊಹಿಸಿದ್ದಾರೆ. ಇಲ್ಲಿನ ಜನರಿಗೆ ರಾಹುಲ್‌ ಅತೀ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಬೇಕು ಎಂಬ ಆಸೆಯನ್ನು ಬಹಿರಂಗವಾಗಿ ಹೇಳಿಕೊಂಡಿ ದ್ದಾರೆ. ಕಕ್ಕಡಂಪೋಯಿಲ್‌ ಎಂಬ ನಗರ ದಲ್ಲಿ ರಾಹುಲ್‌ಗಾಗಿ ಗಲ್ಫ್ ರಾಷ್ಟ್ರಗಳಲ್ಲಿರುವ ಉದ್ಯೋಗಿಗಳು ಬರುತ್ತಿದ್ದಾರೆ. ಇತ್ತೀಚೆಗೆ ನೆರೆಗೆ ತುತ್ತಾದ ಕೆಲವು ಜಿಲ್ಲೆಯಲ್ಲಿ ರಾಹುಲ್‌ ಪರವಾದ ಅಲೆ ಇದೆ. ಹೊರ ದೇಶದಲ್ಲಿ ಕೆಲಸ ಮಾಡುವ ಜನರು ಪ್ರವಾಹ ಬಂದಾಗಲೂ ಬಂದಿರಲಿಲ್ಲ. ಆದರೆ ರಾಹುಲ್‌ ವಯನಾಡಿ ನಲ್ಲೂ ಸ್ಪರ್ಧಿಸುತ್ತಿದ್ದರೂ, ತಮ್ಮ ಕ್ಷೇತ್ರದ ಯುಡಿಎಫ್ ಅಭ್ಯ ರ್ಥಿಗೆ ಮತ ಚಲಾಯಿಸಲು ಗಲ್ಫ್ ರಾಷ್ಟ್ರದಿಂದ ಬರುತ್ತಿದ್ದಾರೆ.

ಆದಿವಾಸಿಗಳ ಅಭಿಲಾಷೆ
ತಟ್ಟೂರ್‌ನ ಪನಿಯಾ ಆದಿವಾಸಿ ಜನರು ಸರಕಾರಗಳು ಇಂದಲ್ಲ ನಾಳೆಯಾದರೂ ನಮ್ನನ್ನು ಮುಖ್ಯ ವಾಹಿಣಿಗೆ ತರುವ ವಿಶ್ವಾಸ ವ್ಯಕ್ತಪಡಿಸಿದೆ. ವಯನಾಡಿನಲ್ಲಿ ಯಾರು ಈ ಬಾರಿ ಗೆಲ್ಲಬೇಕು ಎಂದು ಆದಿವಾಸಿ ಸಮುದಾಯದ ಮಣಿ ಎಂಬವರಲ್ಲಿ ಪ್ರಶ್ನಿಸಿದರೆ ರಾಜೀವ್‌ ಗಾಂಧಿ ಎಂದು ಹೇಳಿದರೂ, ಬಳಿಕ ತಡವರಿಸಿಕೊಂಡು ರಾಹುಲ್‌ ಎಂದು ಹೇಳಲು ಮರೆತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next