Advertisement
ನ್ಯಾಷಲನ್ ಹೆರಾಲ್ಡ್ (2015)ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಯಂಗ್ ಇಂಡಿಯಾ ತನ್ನ ವಶಕ್ಕೆ ಪಡೆದುಕೊಂಡ ಪ್ರಕರಣದಲ್ಲಿ ರಾಹುಲ್ ಮಾನಹಾನಿ ಪ್ರಕರಣ ಎದುರಿಸಿ, 2015 ಡಿಸೆಂಬರ್‌ನಲ್ಲಿ ಜಾಮೀನು ಪಡೆದಿದ್ದರು.
ಯಾಕೆ ಎಲ್ಲ ಕಳ್ಳರು ಮೋದಿ ಕುಲನಾಮ ಹೊಂದಿರುತ್ತಾರೆ ಎಂದು ಮಹಾರಾಷ್ಟ್ರದ ರ್ಯಾಲಿಯೊಂದರಲ್ಲಿ ಹೇಳಿದ್ದ ರಾಹುಲ್‌ಗೆ ಪಾಟ್ನಾ ನ್ಯಾಯಾಲಯ 2019ರಲ್ಲಿ ಜಾಮೀನು ನೀಡಿತ್ತು. ಡಿಸಿಸಿ ಬ್ಯಾಂಕ್ ವಿರುದ್ಧ ಆರೋಪ (2019)
ನೋಟು ಅಮಾನ್ಯಗೊಂಡ ಹೊತ್ತಿನಲ್ಲಿ ಅಮಾನತಾದ ನೋಟುಗಳ ವಿನಿಮಯ ದಂಧೆಯಲ್ಲಿ ಗುಜರಾತ್‌ನ ಅಹ್ಮದಾಬಾದ್ ಡಿಸಿಸಿ ಬ್ಯಾಂಕ್, ತೊಡಗಿತ್ತು ಎಂದು ರಾಹುಲ್ ಆರೋಪಿಸಿದ್ದರು. ಈ ಪ್ರಕರಣದಲ್ಲಿ ಸ್ಥಳೀಯ ಕೋರ್ಟ್ 2019ರಲ್ಲಿ ಜಾಮೀನು ನೀಡಿತ್ತು.
Related Articles
ಗೌರಿ ಲಂಕೇಶ್ ಹತ್ಯೆಗೆ ಬಿಜೆಪಿ-ಆರ್‌ಎಸ್‌ಎಸ್ ಸಿದ್ಧಾಂತವೇ ಕಾರಣವೆಂದು ಹೇಳಿದ್ದ ಅವರಿಗೆ ಮುಂಬೈ ನ್ಯಾಯಾಲಯದಿಂದ 2019ರಲ್ಲಿ ಜಾಮೀನು ದೊರೆತಿತ್ತು.
Advertisement
ಮಹಾತ್ಮ ಗಾಂಧಿ ಹತ್ಯೆ (2016)ಮಹಾತ್ಮ ಗಾಂಧೀಜಿಯನ್ನು ಕೊಂದಿದ್ದೇ ಆರ್‌ಎಸ್‌ಎಸ್ ಎಂಬರ್ಥದಲ್ಲಿ ರಾಹುಲ್ ಒಮ್ಮೆ ಹೇಳಿಕೆ ನೀಡಿದ್ದರು. 2016, ನವೆಂಬರ್‌ನಲ್ಲಿ ಮಹಾರಾಷ್ಟ್ರದ ಭಿವಂಡಿ ನ್ಯಾಯಾಲಯ ರಾಹುಲ್‌ಗೆ 15 ಸಾವಿರ ರೂ. ಖಾತರಿ ಸಹಿತ ಜಾಮೀನು ನೀಡಿತ್ತು. ಬಾರ್ಪೇಟಾ ಸತ್ರ (2016)
2015ರಲ್ಲಿ ಅಸ್ಸಾಂನಲ್ಲಿ ನಡೆದಿದ್ದ ಬಾರ್ಪೇಟಾ ಸತ್ರದಲ್ಲಿ ಪಾಲ್ಗೊಳ್ಳದಂತೆ ತನ್ನನ್ನು ತಡೆದಿದ್ದೇ ಆರ್‌ಎಸ್‌ಎಸ್ ಎಂದು ರಾಹುಲ್ ಆರೋಪಿಸಿದ್ದರು. 2016ರಲ್ಲಿ ಅವರಿಗೆ ಗುವಾಹಟಿ ನ್ಯಾಯಾಲಯ 50 ಸಾವಿರ ರೂ. ಖಾತರಿ ಸಹಿತ ಜಾಮೀನು ನೀಡಿತ್ತು.