Advertisement

ಎತ್ತಿನಗಾಡಿಯಲ್ಲಿ ಕೂತು ರಾಹುಲ್‌ ರೋಡ್‌ಶೋ

06:20 AM Sep 26, 2017 | |

ದ್ವಾರಕಾ: ಸದ್ಯದಲ್ಲೇ ವಿಧಾನಸಭೆ ಚುನಾವಣೆಯನ್ನು ಎದುರಿಸಲಿರುವ ಗುಜರಾತ್‌ನಲ್ಲಿ ಕಾಂಗ್ರೆಸ್‌ನ ಚುನಾವಣಾ ಪ್ರಚಾರ ರ್ಯಾಲಿಗೆ ಉಪಾಧ್ಯಕ್ಷ ರಾಹುಲ್‌ ಗಾಂಧಿ ಚಾಲನೆ ನೀಡಿದ್ದಾರೆ. ಸೋಮವಾರದಿಂದ 3 ದಿನಗಳ ಗುಜರಾತ್‌ ಪ್ರವಾಸ ಆರಂಭಿಸಿರುವ ಅವರು, ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಲು ಅವಕಾಶ ನೀಡದ್ದಕ್ಕೆ ಪ್ರತಿಯಾಗಿ ಎತ್ತಿನಗಾಡಿ ಯಲ್ಲಿ ರೋಡ್‌ ಶೋ ನಡೆಸಿದರು. ಈ ಮೂಲಕ ರೈತ ಸಮುದಾಯದ ಒಲವನ್ನು ಗಳಿಸುವ ಪ್ರಯತ್ನವನ್ನೂ ಮಾಡಿದರು.

Advertisement

ಬೆಳಗ್ಗೆ ಪ್ರಸಿದ್ಧ ದ್ವಾರಕಾಧೀಶ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವ ಮೂಲಕ 3 ದಿನಗಳ ಅಭಿಯಾನ ಆರಂಭಿಸಿದರು. ದ್ವಾರಕಾದಿಂದ ಜಾಮ್‌ನಗರದವರೆಗೆ ಎತ್ತಿನಗಾಡಿಯಲ್ಲಿ ರೋಡ್‌ ಶೋ ನಡೆಸಿದ ರಾಹುಲ್‌ ಅವರು, ನೋಟುಗಳ ಅಮಾನ್ಯ, ಜಿಎಸ್‌ಟಿ, ಗುಜರಾತ್‌ ಮಾದರಿ ಅಭಿವೃದ್ಧಿ ಮತ್ತಿತರ ವಿಚಾರಗಳ ನ್ನೆತ್ತಿಕೊಂಡು ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು. ರಾಹುಲ್‌ ಗುಜರಾತ್‌ಗೆ ಆಗಮಿಸುತ್ತಿದ್ದಂತೆ ಅವರನ್ನು ಮೀಸಲು ಪರ ಹೋರಾಟಗಾರ ಹಾರ್ದಿಕ್‌ ಪಟೇಲ್‌ ಟ್ವೀಟ್‌ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತ್ತು.

ಎಲ್ಲೆಡೆ ಖಾಸಗೀಕರಣ: ಗುಜರಾತ್‌ ಬಿಜೆಪಿ ಸರಕಾರವನ್ನು ಟೀಕಿಸಿದ ರಾಹುಲ್‌, “ಇಲ್ಲಿ ಎಲ್ಲವೂ ಖಾಸಗೀಕರಣಗೊಳ್ಳುತ್ತಿದೆ. ಅಗ್ಗದ ದರದಲ್ಲಿ ಶಿಕ್ಷಣ, ಆರೋಗ್ಯ ಸೇವೆ ಪಡೆಯುವ ಬಡಜನರ ಹಕ್ಕನ್ನು ಕಸಿದುಕೊಂಡು ಖಾಸಗೀಕರಣವನ್ನು ಪರಿಚಯಿಸಲಾಗುತ್ತಿದೆ. ಇದು ಬಿಜೆಪಿಯ ರೈತ ವಿರೋಧಿ, ಬಡವರ ವಿರೋಧಿ ಧೋರಣೆಗೆ ಸಾಕ್ಷಿ,’ ಎಂದರು. ನೋಟು ಅಮಾನ್ಯದಿಂದ ತೊಂದರೆಯಾಗಿದ್ದು ಬಡವರು ಹಾಗೂ ರೈತರಿಗೆ. ಅವರು ಎಲ್ಲ ವ್ಯವಹಾರಗಳಿಗೂ ನಗದನ್ನೇ ಬಳಸುತ್ತಾರೆಯೇ ಹೊರತು, ಫೋನ್‌, ಡೆಬಿಟ್‌ ಕಾರ್ಡ್‌ ಮೂಲಕ ವಹಿವಾಟು ನಡೆಸಲು ಅವರಿಂ ದಾಗದು. ಇದನ್ನು ಅರ್ಥಮಾಡಿಕೊಳ್ಳದೇ ಡಿಜಿಟಲೀಕರಣದತ್ತ ಮುಖಮಾಡಿ ಎಂದರೆ ಹೇಗೆ ಎಂದು ಪ್ರಶ್ನಿಸಿದರು. 

ರಾಹುಲ್‌ ಅವರ ಗುಜರಾತ್‌ ಭೇಟಿಯು ಕಾಂಗ್ರೆಸ್‌ಗೆ ವಿಶ್ವಾಸಾರ್ಹ ಸ್ಥಳೀಯ ನಾಯಕರಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.
– ವಿಜಯ್‌ ರೂಪಾನಿ, ಗುಜರಾತ್‌ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next