Advertisement

“Crony ಜೀವಿ ದೇಶವನ್ನು ಮಾರುತ್ತಿದ್ದಾರೆ” : ಮೋದಿ ವಿರುದ್ಧ ರಾಹುಲ್ ಟ್ವೀಟಾಸ್ತ್ರ

06:54 PM Feb 10, 2021 | Team Udayavani |

ನವ ದೆಹಲಿ : ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಆಂದೋಲನ ಜೀವಿ ಎಂದು ಸಂಬೊಧಿಸಿದ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

Advertisement

ರಾಷ್ಟ್ರಪತಿಯವರ ಭಾಷಣಕ್ಕೆ ಉತ್ತರಿಸಿದ ಪ್ರಧಾನಿ, ರೈತರ ಪ್ರತಿಭಟನೆಯ ಜೊತೆಗೆ ಇದ್ದವರ ಬಗ್ಗೆ ರಾಷ್ಟ್ರ ಎಚ್ಚರದಿಂದಿರಬೇಕು. ಆಂದೋಲನ ಜೀವಿಗಳ ಹೊಸ ಬೆಳೆ ಇದು. ಅವರು ಪ್ರತಿಭಟನೆಗಾಗಿಯೇ ಬದುಕುತ್ತಾರೆ. ಅವರು ಯಾವಾಗಲೂ ಹೊಸ ಪ್ರತಿಭಟನೆ ಮಾಡಲು ಮಾರ್ಗವನ್ನು ಹುಡುಕುತ್ತಾರೆ ಎಂದು ರಾಜ್ಯಸಭೆಗೆ ಪ್ರದಾನಿ ಹೇಳಿದ್ದರು.

ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ವಿರೋಧಿಸುತ್ತಾ ರೈತರ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದೆ.

ಮೋದಿ ಟೀಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಮ್ “ಆಂದೋಲನ ಜೀವಿ” ಎಂದು ಹೇಳಲು ಹೆಮ್ಮೆಯಾಗುತ್ತದೆ. ಮಹಾತ್ಮ ಸರ್ವ ಶ್ರೇಷ್ಠ ಆಂದೋಲನ ಜೀವಿಯಾಗಿದ್ದರು ಎಂದು ಮೋದಿಗೆ ತಿರುಗೇಟು ನೀಡಿದರು.

ಈ ಬೆಳವಣಿಗೆಯಾದ ಕೆಲ ಹೊತ್ತಲ್ಲೇ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಮತ್ತೆ ಟ್ವೀಟ್ ಅಸ್ತ್ರವನ್ನು ಬಳಸಿದ್ದಾರೆ. “Crony ಜೀವಿ ದೇಶವನ್ನು ಮಾರುತ್ತಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.

Advertisement

ಇಷ್ಟೆಲ್ಲಾ ಬೆಳವಣಿಗೆಯ ನಡುವೆ ಸಾವಿರಾರು ರೈತ ಪ್ರತಿಭಟನಾಕಾರರು ದೆಹಲಿ ಹರಿಯಾಣ ಗಡಿ ಭಾಗಗಳಲ್ಲಿ ಕ್ಯಾಂಪಿಂಗ್ ಮಾಡುತ್ತಿದ್ದಾರೆ. ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ತನಕ ಮನೆಗೆ ತೆರಳುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.

ಇತ್ತ, ಕೇಂದ್ರ ಸರ್ಕಾರ, ಕಾನೂನಿನ ಷರತ್ತುಗಳನ್ನು ಷರತ್ತುಗಳ ಮೂಲಕ ಚರ್ಚಿಸಲು ಪ್ರಸ್ತಾಪಿಸಿದೆ. ಒಂದುವರೆ ವರ್ಷ ಅವುಗಳ ಅನುಷ್ಟಾನವನ್ನೂ ಕೂಡ ನಿಲ್ಲಿಸಿದೆ. ಆದರೇ, ರೈತರು ಮೂರು ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯಲೇ ಬೇಕು ಎಂದು ಹಠ ಹಿಡಿದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next