Advertisement

ಪಟೇಲ್‌ ಸಮುದಾಯ ಓಲೈಕೆಗೆ ರಾಹುಲ್‌ ಗಾಂಧಿ ಬಿರುಸಿನ ಯತ್ನ

10:24 AM Sep 27, 2017 | Team Udayavani |

ಜಾಮ್‌ನಗರ್‌: ಗುಜರಾತ್‌ ವಿಧಾನಸಭೆ ಚುನಾವಣೆ ಗಮನದಲ್ಲಿರಿಸಿ ಕೊಂಡು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಎರಡನೇ ದಿನವಾಗಿರುವ ಮಂಗಳ ವಾರ ಪ್ರವಾಸ ಮುಂದುವರಿಸಿದ್ದಾರೆ. ಸೌರಾಷ್ಟ್ರ ಪ್ರದೇಶದಲ್ಲಿ  ಪಟೇಲ್‌ ಸಮು ದಾಯ ದವರ ಬೆಂಬಲ ಪಡೆದುಕೊಳ್ಳುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸರ್ದಾರ್‌ ವಲ್ಲಭ ಭಾಯ್‌ ಪಟೇಲ್‌ ದೇಶಕ್ಕೆ ನೀಡಿದ ಕೊಡುಗೆ ಸ್ಮರಿಸಿದರು.  ಮೀಸಲು ಹೋರಾಟದ ವೇಳೆ ಗುಜರಾತ್‌ ಸರಕಾರ ಸಮುದಾಯದ ವಿರುದ್ಧ ಕಠಿನವಾಗಿ ನಡೆದುಕೊಳ್ಳಲು ತೀರ್ಮಾನಿಸಿತ್ತು ಎಂದು ಆರೋಪಿಸಿದರು. 

Advertisement

ರಾಜ್‌ಕೋಟ್‌ಗೆ ತೆರಳುವ ದಾರಿಯಲ್ಲಿ ಧೊಲ್‌ ಎಂಬಲ್ಲಿ ಕೆಲ ಕಾಲ ತಂಗಿ ದರು. ಈ ಸಂದರ್ಭದಲ್ಲಿ “ಜೈ ಸರ್ದಾರ್‌; ಜೈ ಪಾಟಿದಾರ್‌’ ಎಂಬ ಘೋಷ ವಾಕ್ಯ ಬರೆದಿರುವ ಟೋಪಿ ಧರಿಸಿದರು. ಈ ವೇಳೆ ಮಾತನಾಡಿದ ಅವರು, ಪಟೇಲ್‌ ಸಮುದಾಯವೇ ದೇಶಕ್ಕೆ ಸರ್ದಾರ್‌ ವಲ್ಲಭ ಭಾಯ್‌ ಪಟೇಲ್‌ರಂಥ ನಾಯಕರನ್ನು ನೀಡಿದೆ. ಕಾಂಗ್ರೆಸ್‌ ಎಲ್ಲಾ ಸಮುದಾಯಗಳ ನಾಯ  ಕ ರನ್ನು ಒಗ್ಗೂಡಿಸಿ ಮುಂದುವರಿಯುವ ಪದ್ಧತಿಯಲ್ಲಿ ನಂಬಿಕೆ ಇರಿಸಿಕೊಂಡಿದೆ ಎಂದರು. ಪಟೇಲ್‌ ಪ್ರತಿಮೆಗೆ “ಮೇಡ್‌ ಇನ್‌ ಚೈನಾ’ ಎಂದು ಬರೆಸುವುದು ನಾಚಿಕೆಗೇಡಿನ ವಿಷಯವಲ್ಲವೇ ಎಂದೂ ಅವರು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next