ಹೊಸದಿಲ್ಲಿ: ಒಂಬತ್ತು ದಿನಗಳ ವಿರಾಮದ ನಂತರ ಹೊಸದಿಲ್ಲಿಯಲ್ಲಿಂದು ರಾಹುಲ್ ಗಾಂಧಿಯ ಭಾರತ್ ಜೋಡೊ ಯಾತ್ರೆ ಮತ್ತೆ ಆರಂಭವಾಗಲಿದೆ. ಇಂದು ಯಾತ್ರೆಯು ಉತ್ತರ ಪ್ರದೇಶವನ್ನು ಪ್ರವೇಶ ಮಾಡಲಿದೆ. ದೆಹಲಿಯ ಕಾಶ್ಮೀರ್ ಗೇಟ್ ನಲ್ಲಿರುವ ಹನುಮಾನ್ ಮಂದಿರದಿಂದ ಯಾತ್ರೆ ಪುನರಾರಂಭವಾಗುತ್ತದೆ, ಮಧ್ಯಾಹ್ನದ ಸುಮಾರಿಗೆ ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ಪ್ರವೇಶಿಸಲಿದೆ.
ಭಾಗಪತ್ ನ ಮವಿಕಲಾ ಗ್ರಾಮದಲ್ಲಿ ಇಂದು ರಾತ್ರಿ ರಾಹುಲ್ ಗಾಂಧಿ ತಂಗಲಿದ್ದಾರೆ. ಯಾತ್ರೆಯು ಜನವರಿ 4 ರಂದು ಉತ್ತರ ಪ್ರದೇಶದ ಶಾಮ್ಲಿ ಮೂಲಕ ಹಾದುಹೋಗುತ್ತದೆ. ಜನವರಿ 5 ರ ಸಂಜೆ ಪಾಣಿಪತ್ ನ ಸನೌಲಿ ಮೂಲಕ ಹರಿಯಾಣವನ್ನು ಪ್ರವೇಶಿಸಲಿದೆ.
ರಾಹುಲ್ ಗಾಂಧಿಯ ವಾಕಥಾನ್ 110 ದಿನಗಳಿಗಿಂತ ಹೆಚ್ಚು ಮತ್ತು 3,000 ಕಿ.ಮೀ. ಕ್ರಮಿಸಿದೆ. ದಕ್ಷಿಣ ಭಾರತದಲ್ಲಿ ಆರಂಭವಾದ ಯಾತ್ರೆಯು ಬ್ರೇಕ್ ಗೆ ಮೊದಲು ರಾಜಸ್ಥಾನ ಮತ್ತು ದಿಲ್ಲಿಯಲ್ಲಿ ಕ್ರಮಿಸಿದೆ.
ಇದನ್ನೂ ಓದಿ:ಮಂಗಳೂರು -ಸುಬ್ರಹ್ಮಣ್ಯ: ರೈಲ್ವೇ ಹಳಿ ವಿದ್ಯುದ್ದೀಕರಣ… ನೈಋತ್ಯ ರೈಲ್ವೇ ವಲಯದ ಬಹು ನಿರೀಕ್ಷಿತ ಯೋಜನೆ
ಭಾರತ್ ಜೋಡೊ ಯಾತ್ರೆಯು ಜನವರಿ 26ರಂದು ಶ್ರೀನಗರ ತಲುಪಲಿದೆ. ಇದರ ಬಳಿಕ ಕಾಂಗ್ರೆಸ್ ‘ಹಾಥ್ ಸೆ ಹಾಥ್ ಜೋಡೊ’ ಅಭಿಯಾನ ಆರಂಭಿಸಲಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ‘ಭಾರತ್ ಜೋಡೋ ಯಾತ್ರೆಯ ನಂತರ ಕಾಂಗ್ರೆಸ್ ಎರಡು ತಿಂಗಳ `ಹಾಥ್ ಸೆ ಹಾಥ್ ಜೋಡೋ ಅಭಿಯಾನ’ವನ್ನು ಪ್ರಾರಂಭಿಸಲಿದೆ. ಈ ಉಪಕ್ರಮದ ಭಾಗವಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರತಿಯೊಂದರಲ್ಲೂ ಮಹಿಳಾ ಸದಸ್ಯರೊಂದಿಗೆ ಪಾದಯಾತ್ರೆ ಮತ್ತು ರ್ಯಾಲಿಗಳನ್ನು ನಡೆಸಲಿದ್ದಾರೆ ಎಂದಿದ್ದಾರೆ.