Advertisement

‘A1-A2’ ದೇಶ ಚಕ್ರವ್ಯೂಹದಲ್ಲಿ ಸಿಲುಕಿದೆ: ಲೋಕಸಭೆಯಲ್ಲಿ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

08:35 PM Jul 29, 2024 | Team Udayavani |

ಹೊಸದಿಲ್ಲಿ: ಲೋಕಸಭೆಯಲ್ಲಿ ಸೋಮವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Advertisement

ಮಹಾಭಾರತವನ್ನು ಉಲ್ಲೇಖಿಸಿ, ದೊಡ್ಡ ಉದ್ಯಮಗಳ ಏಕಸ್ವಾಮ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಭಾರತವನ್ನು ‘ಚಕ್ರವ್ಯೂಹ’ ವಶಪಡಿಸಿಕೊಂಡಿದೆ ಎಂದು ಕಿಡಿ ಕಾರಿದರು. ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಅವರ ಹೆಸರು ಉಲ್ಲೇಖಿಸಿದ್ದರಿಂದ ಲೋಕಸಭೆಯು ತೀವ್ರ ಗದ್ದಲ ಉಂಟಾಯಿತು.ಸ್ಪೀಕರ್ ಓಂ ಬಿರ್ಲಾ ಅವರು ಸದನದ ಸದಸ್ಯರಲ್ಲದವರ ಹೆಸರು ನ್ನು ಉಲ್ಲೇಖಿಸುವುದನ್ನು ತಡೆದರು. ಆ ಬಳಿಕ ರಾಹುಲ್ ಗಾಂಧಿ ಅವರು ಕೈಗಾರಿಕೋದ್ಯಮಿಗಳನ್ನು ಹೆಸರಿಸದೆ ಉಲ್ಲೇಖಿಸದೆ ‘A1-A2’ ಎಂದು ಹೇಳಿದರು.

“ಸಾವಿರಾರು ವರ್ಷಗಳ ಹಿಂದೆ ಹರಿಯಾಣದ ಕುರುಕ್ಷೇತ್ರದಲ್ಲಿ ‘ಚಕ್ರವ್ಯೂಹ’ದಲ್ಲಿ ಆರು ಜನರು ಅಭಿಮನ್ಯುವನ್ನು ಕೊಂದಿದ್ದರು ಎಂದು ನರೇಂದ್ರ ಮೋದಿ, ಅಮಿತ್ ಶಾ, ಅಜಿತ್ ದೋವಲ್, ಮೋಹನ್ ಭಾಗವತ್, ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಅವರ ಹೆಸರು ಹೇಳಿದರು. ‘ಚಕ್ರವ್ಯೂಹ’ದಲ್ಲಿ ಹಿಂಸೆ ಮತ್ತು ಭಯವಿದೆ. ಅಭಿಮನ್ಯು ‘ಚಕ್ರವ್ಯೂಹ’ದಲ್ಲಿ ಸಿಕ್ಕಿಹಾಕಿಕೊಂಡು ಹತ್ಯೆಗೀಡಾದ ” ಎಂದು ರಾಹುಲ್ ಹೇಳಿದರು.

ಇಬ್ಬರು ಕೈಗಾರಿಕೋದ್ಯಮಿಗಳು ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿ ರಾಷ್ಟ್ರದ ಸಂಪತ್ತಿನ ಮೇಲೆ ಏಕಸ್ವಾಮ್ಯ ಸಾಧಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಈ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಧ್ಯಪ್ರವೇಶಿಸಿ, ‘ಪ್ರತಿಪಕ್ಷದ ನಾಯಕರು ಸ್ಪೀಕರ್‌ಗೆ ಸವಾಲು ಹಾಕುತ್ತಿದ್ದಾರೆ, ಅವರು ನಿಯಮಗಳನ್ನು ಪಾಲಿಸುತ್ತಿಲ್ಲ’ ಎಂದರು. “ಸ್ಪೀಕರ್ ಸರ್, ಸಚಿವರು A1 ಅಥವಾ A2 ಅನ್ನು ರಕ್ಷಿಸಲು ಬಯಸುತ್ತಿದ್ದಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಅವರು ಮೇಲಿನಿಂದ ಆದೇಶವನ್ನು ಸ್ವೀಕರಿಸಿದ್ದಾರೆ” ಎಂದು ರಾಹುಲ್ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next