Advertisement

ಮೋದಿ 68ನೇ ಹುಟ್ಟುಹಬ್ಬ: ರಾಹುಲ್‌, ಇತರ ನಾಯಕರ ಅಭಿನಂದನೆ

12:34 PM Sep 17, 2018 | udayavani editorial |

ಹೊಸದಿಲ್ಲಿ : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರ 68ನೇ ಹುಟ್ಟು ಹಬ್ಬದ ಪ್ರಯುಕ್ತ ಟ್ವಿಟರ್‌ನಲ್ಲಿ ಶುಭ ಹಾರೈಸಿದ್ದಾರೆ. 

Advertisement

“ನಮ್ಮ  ಪ್ರಧಾನಿ ನರೇಂದ್ರ ಮೋದಿ ಜೀ ಗೆ ಹುಟ್ಟು ಹಬ್ಬದ ಶುಭಾಶಯಗಳು. ಉತ್ತಮ ಆರೋಗ್ಯ ಮತ್ತು ಸಂತಸವನ್ನು ಹಾರೈಸುತ್ತೇನೆ” ಎಂದು ರಾಹುಲ್‌ ಹೇಳಿದ್ದಾರೆ. 

ರಾಹುಲ್‌ ಅವರಂತೆ ಇತರ ನಾಯಕರಾದ ಮಮತಾ ಬ್ಯಾನರ್ಜಿ, ತೇಜಸ್ವಿ ಯಾದವ್‌, ಎಚ್‌ಡಿ ಕುಮಾರಸ್ವಾಮಿ, ಪ್ರಫ‌ುಲ್‌ ಪಟೇಲ್‌ ಮೊದಲಾದವರು ಕೂಡ ಮೋದಿ ಅವರಿಗೆ ಶುಭ ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next