Advertisement
ಈ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್, “ನಾನಿಲ್ಲಿ ಮಾತೆಗೆ ಪೂಜೆ ಸಲ್ಲಿಸಲು ಬಂದಿದ್ದೇನೆ. ಇಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡಲು ಬಯಸುವುದಿಲ್ಲ’ ಎಂದಷ್ಟೇ ಹೇಳಿ ಮುಂದೆ ಸಾಗಿದ್ದಾರೆ. ಭದ್ರತಾ ಸಿಬ್ಬಂದಿ, ಕಾಂಗ್ರೆಸ್ ಕಾರ್ಯಕರ್ತರು ಕೂಡ ರಾಹುಲ್ ಕಾಲ್ನಡಿಗೆಗೆ ಸಾಥ್ ನೀಡಿದ್ದಾರೆ. ದಾರಿ ಮಧ್ಯೆ ಸಿಗುತ್ತಿದ್ದ ಯಾತ್ರಾರ್ಥಿಗಳೊಂದಿಗೂ ರಾಹುಲ್ ಸಂವಾದ ನಡೆಸಿದ್ದಾರೆ.ಜಮ್ಮು ಭೇಟಿಯ ಬಳಿಕ ರಾಹುಲ್ ಲಡಾಖ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಸಹಾ ಯಕ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ಕೈಲಾಶ್ ಚೌಧರಿ ಅವರೂ ಗುರುವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಜನ ಸಂಪರ್ಕ ಅಭಿಯಾ ನದ ಅಂಗವಾಗಿ ಅವರು ಅಲ್ಲಿಗೆ ತೆರಳಿದ್ದು, ಸಮಾಜದ ವಿವಿಧ ವರ್ಗಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಜತೆಗೆ ಕೇಂದ್ರದ ಯೋಜನೆಗಳನ್ನೂ ಜನರಿಗೆ ತಿಳಿಸಲಿದ್ದಾರೆ. ಹಂತ ಹಂತ ವಾಗಿ ಒಟ್ಟು 70 ಮಂದಿ ಕೇಂದ್ರ ಸಚಿವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.