Advertisement

ಇಂದು ಸಮಾಜದಲ್ಲಿ ಸತ್ಯ ಹೇಳುವವರಿಗೆ ಭಯ ಹುಟ್ಟಿಸಲಾಗುತ್ತಿದೆ: ಬಸವನಾಡಿನಲ್ಲಿ ರಾಹುಲ್ ಗಾಂಧಿ

02:30 PM Apr 23, 2023 | Team Udayavani |

ಬಾಗಲಕೋಟೆ: ಬಸವಣ್ಣ ಸತ್ಯದ‌ ಪರವಾಗಿ ಹೋರಾಡಿದವರು. ಇಂದು ಸಮಾಜದಲ್ಲಿ ಸತ್ಯ ಹೇಳುವವರಿಗೆ ಭಯ ಹುಟ್ಟಿಸಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

Advertisement

ಕೂಡಲಸಂಗಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಬಸವಣ್ಣನವರ ಜಯಂತಿಯಲ್ಲಿ ಭಾಗಿಯಾಗಿರುವುದು ಖುಷಿ ಕೊಟ್ಟಿದೆ. ನನ್ನನ್ನು ಆಹ್ವಾನಿಸಿದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವ, ಶರಣ ತತ್ವವನ್ನು ಬಸವಣ್ಣ ರಕ್ಷಣೆ ಮಾಡಿದರು. ಪ್ರಜಾಪ್ರಭುತ್ವ, ಸಂಸತ್ತು ಎಲ್ಲದಕ್ಕೂ ಬಸವಣ್ಣ ಪ್ರೇರಣೆ. ಸಮಾಜದಲ್ಲಿ ಅಂಧತ್ವವಿದ್ದಾಗ ಬಸವಣ್ಣನವರ ಬೆಳಕಿನ‌ ಹಾದಿ ತೋರಿದರು ಎಂದರು.

ಇನ್ನೊಬ್ಬರನ್ನು ಪ್ರಶ್ನೆ ಮಾಡೋದು ಸುಲಭ. ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳೋದು ಕಷ್ಟದ ಕೆಲಸ. 8ನೇ ವಯಸ್ಸಿನಲ್ಲೇ ಜನಿವಾರ ಧರಿಸಲು ನಿರಾಕರಣೆ ಮಾಡಿದರು. 8ನೇ ವಯಸ್ಸಿನಲ್ಲಿ ಬಸವಣ್ಣನವರಿಗೆ ಇಂಥ ಯೋಚನೆ ಹೇಗೆ ಬಂತು ಎಂದು ಪ್ರಶ್ನಿಸಿದೆ ಆಗ ತನ್ನ ಸ್ನೇಹಿತನ‌ ಮೇಲೆ ಆಕ್ರಮಣ ನಡೆದಿತ್ತು. ಅವರ ಮೇಲಿನ ಶೋಷಣೆಯಿಂದ ಜಾಗೃತರಾದರು. ಪೂರ್ತಿ ಜೀವನ ತಮ್ಮನ್ನು ತಾವು ಜಾತಿವಾದ, ಲೋಕತಂತ್ರ, ಶೋಷಣೆ, ಸಮಾಜದ ಬಗ್ಗೆ ತಮ್ಮನ್ನು ತಾವು‌ ಪ್ರಶ್ನೆ ಮಾಡಿಕೊಂಡರು. ಆ ಪ್ರಶ್ನೆಗೆ ಉತ್ತರ ಕಂಡಕೊಂಡು ಜೀವನದಲ್ಲಿ ಪಾಲಿಸಿದರು.

ಇದನ್ನೂ ಓದಿ:ಈ ಬಾರಿ ಕಾಂಗ್ರೆಸ್ 141 ಸ್ಥಾನ ಗೆಲ್ಲಲಿದೆ: ಶೃಂಗೇರಿ ಯಾಗದ ಬಳಿಕ ಡಿಕೆ ಶಿವಕುಮಾರ್ ಹೇಳಿಕೆ

ಸಮಾಜದಲ್ಲಿ ಸತ್ಯ ತಿಳಿದು ಕೊಂಡರೂ ಪ್ರಶ್ನೆ ಮಾಡಲು ಯಾರೂ ಮುಂದಾಗಲ್ಲ. ಜನ ಶೋಷಣೆ, ತಪ್ಪು ಕಂಡರೂ ಅದಕ್ಕೆ ಧ್ವನಿಯಾಗಲು ಹೆದರುತ್ತಾರೆ. ಆದರೆ ಬಸವಣ್ಣ ಹಿಂದೇಟು ಹಾಕಲಿಲ್ಲ. ಸಮಾಜ ಪರಿವರ್ತನೆಗೆ ಮುಂದಾದರು ಎಂದರು.

Advertisement

ಬಸವಣ್ಣನವರ ಮೂರ್ತಿ‌ ಮುಂದೆ ಹೂವು ಅರ್ಪಿಸಿದವು. ಅವರು ಬದುಕಿದ್ದಾಗ ಅವರ ಮೇಲೆ ಟೀಕೆಗಳು ಹೆಚ್ಚಾದವು, ನೋವಿಸಿದರೂ ಅವರು ಹಿಂದೇಟು ಹಾಕಿಲ್ಲ. ಆ ಧೈರ್ಯಕ್ಕೆ ಅವರಿಗೆ ಇಂದು ಹೂವು ಅರ್ಪಿಸಿದ್ದೇವೆ. ಸ್ವಾಮೀಜಿ ಭಾಷಣ ಕೇಳಿ ಬಸವಣ್ಣನವರ ಬಗ್ಗೆ ತಿಳಿದುಕೊಳ್ಳಲು ಅವಕಾಶವಾಯಿತು. ಬಸವಣ್ಣನವರ ಬಗ್ಗೆ ಹಿಂದೆ ಬಂದಾಗಲೇ ತಿಳಿದಿದ್ದೇನೆ. ಅವರ ತತ್ವಗಳಿಂದ ಜೀವನಕ್ಕೆ ಮಾರ್ಗ ಸಿಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next