ಚಾಮರಾಜನಗರ : ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಬರೋಬ್ಬರಿ 24 ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ರಾಜ್ಯದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ. ಜಿಲ್ಲಾಡಳಿತದ ಬೇಜವಾಬ್ದಾರಿಯಿಂದ ನಡೆದಿರುವ ಘಟನೆ ಇದು ಎಂದು ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಚಾಮರಾಜನಗರ ಸಾವು ಪ್ರಕರಣದ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ ಇದು ಸಾವೋ ಅಥವಾ ಕೊಲೆಯೋ ಎಂದು ಪ್ರಶ್ನೆ ಮಾಡಿದ್ದಾರೆ. ವ್ಯವಸ್ಥೆ ಎಚ್ಚರಗೊಳ್ಳುವ ಮೊದಲು ಇನ್ನು ಇಂತಹ ಎಷ್ಟು ಸಾವು ನೋವುಗಳು ಸಂಭವಿಸುತ್ತವೋ. ಸಾವನ್ನಪ್ಪಿರುವರ ಕುಟುಂಬಗಳಿಗೆ ಸಂತಾಪ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವಿಚಾರವಾಗಿ ಡಿಕೆ ಶಿವಕುಮಾರ್ ಕೂಡ ಮಾತನಾಡಿದ್ದು, ಈ ಸರ್ಕಾರ ಪ್ರಚಾರ ಪ್ರಿಯ ಸರ್ಕಾರ. ಸರ್ಕಾರಕ್ಕೆ ಆಕ್ಸಿಜನ್ ಕೊಡೋದಕ್ಕೂ ಆಗಲ್ಲ ಅಂದ್ರೆ ಏನು ಅರ್ಥ ಎಂದು ಪ್ರಶ್ನೆ ಮಾಡಿದ್ದಾರೆ.