ಕಾಪು: ಕಾಂಗ್ರೆಸ್ ರಾಷ್ಟ್ರೀಯ ನಾಯಕ, ಸಂಸದ ರಾಹುಲ್ ಗಾಂಧಿ ಅವರು ಎ. 27ರಂದು ಕಾಪು ಕ್ಷೇತ್ರದ ಉಚ್ಚಿಲಕ್ಕೆ ಆಗಮಿಸಲಿದ್ದಾರೆ. ಉಚ್ಚಿಲ ಶ್ರೀ ಮಹಾಲಕ್ಷಿ$¾ದೇವಸ್ಥಾನದ ಶಾಲಿನಿ ಜಿ. ಶಂಕರ್ ಸಭಾಂಗಣದಲ್ಲಿ ನಡೆಯುವ ಮೀನುಗಾರರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಬುಧವಾರ ಕಾಪು ರಾಜೀವ ಭವನದಲ್ಲಿ ಸುದ್ಧಿಗೋಷ್ಟಿಯಲ್ಲಿ ಈ ಬಗ್ಗೆ ವಿವರ ನೀಡಿದ ಅವರು, ಎ. 27ರಂದು ಮಧ್ಯಾಹ್ನ 3 ಗಂಟೆಗೆ ಉಡುಪಿಗೆ ಆಗಮಿಸಿ, ಅಲ್ಲಿಂದ ಕಾಪು ಕ್ಷೇತ್ರಕ್ಕೆ ಆಗಮಿಸಲಿದ್ದು ಮೊದಲಿಗೆ ಕಟಪಾಡಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಮೂಳೂರಿನಿಂದ ಉಚ್ಚಿಲದವರೆಗೆ ನಡೆಯಲಿರುವ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮೀನುಗಾರರ ಜತೆಗಿನ ಸಂವಾದದಲ್ಲಿ ಭಾಗವಹಿಸಿ, ಮೀನುಗಾರ ಸಮುದಾಯ ಮತ್ತು ಸಮಸ್ತ ಮೀನುಗಾರರ ಕಷ್ಟ ನಷ್ಟಗಳ ಬಗ್ಗೆ ಅಹವಾಲು ಸ್ವೀಕರಿಸಲಿದ್ದಾರೆ.
ಕಾಪು, ಉಡುಪಿ, ಬೈಂದೂರು, ಕುಂದಾಪುರ, ಮಂಗಳೂರು ಜಿಲ್ಲೆಗಳ ಸುಮಾರು ಎರಡೂವರೆ ಸಾವಿರ ಮಂದಿ ಮೀಗುಗಾರಿಕಾ ಪ್ರತಿನಿಧಿಗಳು ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಬಿಜೆಪಿಯಿಂದ ವೋಟ್ ಬ್ಯಾಂಕ್ ರಾಜಕೀಯಕ್ಕೆ ಮೀನುಗಾರರ ಬಳಕೆ : ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಾಡದೋಣಿ, ಕೈರಂಪಣಿ ಸಹಿತ ಎಲ್ಲಾ ವರ್ಗದ ಮೀನುಗಾರರಿಗೂ ನಿರಂತರವಾಗಿ ಸೀಮೆ ಎಣ್ಣೆ ಸಬ್ಸಿಡಿ ಕೊಡುವ ಕೆಲಸ ಮಾಡಿತ್ತು. ಆದರೆ ಹಾಲಿ ಬಿಜೆಪಿ ಸರಕಾರವು ಮೀನುಗಾರರ ಸಮುದಾಯದ ವೃತ್ತಿಗೆ ಅನುಗುಣವಾಗಿ ಸಬ್ಸಿಡಿ, ಸವಲತ್ತು ನೀಡಿಕೆ, ಡ್ರಜ್ಜಿಂಗ್ ಸೌಲಭ್ಯ ಸಹಿತವಾಗಿ ಯಾವುದೇ ರೀತಿಯ ಸ್ಪಂಧನೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಳೆದ 6 ತಿಂಗಳುಗಳಿಂದ ಸೀಮೆ ಎಣ್ಣೆ ಸಬ್ಸಿಡಿ ಸಿಗದೇ ಮೀನುಗಾರರು ಕಂಗಲಾಗಿದ್ದಾರೆ. ಬಿಜೆಪಿ ಮೀನುಗಾರ ಸಮುದಾಯವನ್ನು ನಿರಂತರವಾಗಿ ವೋಟ್ ಬ್ಯಾಂಕ್ ರಾಜಕೀಯಕ್ಕೆ ಮಾತ್ರ ಬಳಸುತ್ತಿದ್ದು, ಮೀನುಗಾರರ ಅಭಿವೃದ್ಧಿಗಾಗಿ ಯೋಚನೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಕೇರಳ ಸಂಸದ, ಎಐಸಿಸಿ ಮೀನುಗಾರರ ಸಂಘಟನೆಯ ಮಾಜಿ ಅಧ್ಯಕ್ಷ ಟಿ. ಪ್ರತಾಪನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕೆಪಿಸಿಸಿ ಮುಖಂಡರಾದ ಎಂ.ಎ. ಗಫೂರ್, ನವೀನ್‌ಚಂದ್ರ ಜೆ. ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ರಾಜಶೇಖರ ಕೋಟ್ಯಾನ್, ಕೆಪಿಸಿಸಿ ಮೀನುಗಾರರ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ ಬಿ. ಸೊಣೆಗಾರ್, ಪಕ್ಷದ ಮುಖಂಡರಾದ ವಿಲ್ಸನ್ ರೋಡ್ರಿಗಸ್, ಹರಿಶ್ ಕಿಣಿ, ರಮೀಜ್ ಹುಸೇನ್, ಜೀತೇಂದ್ರ ಫುಟಾರ್ಡೊà, ಶಾಂತಲತಾ ಶೆಟ್ಟಿ, ಶರ್ಪುದ್ದೀನ್ ಶೇಖ್, ವಿಶ್ವಾಸ್ ಅಮೀನ್, ದಿನೇಶ್ ಕೋಟ್ಯಾನ್, ಅಮೀರ್ ಕಾಪು, ಹರೀಶ್ ನಾಯಕ್ ಉಪಸ್ಥಿತರಿದ್ದರು.
ರಾಜಕೀಯ ಪ್ರೇರಿತ ಐಟಿ ದಾಳಿ ಖಂಡನೀಯ :
ಕರಾವಳಿಯ ಉದ್ದಗಲದಲ್ಲಿ ಸಮಾಜವನ್ನು ಸಂಘಟಿಸಿ, ಜನರ ಕಷ್ಟಕ್ಕೆ ಸ್ಪಂಧಿಸುತ್ತಾ ಬಂದಿರುವ ಮೊಗವೀರ ಸಮುದಾಯದ ಮುಂದಾಳು ಸೇರಿದಂತೆ ಹಲವು ಉದ್ಯಮಿಗಳ ಮೇಲೆ ಚುನಾವಣಾ ಸಮಯದಲ್ಲಿ ಬಿಜೆಪಿ ರಾಜಕೀಯ ಪ್ರೇರಿತವಾಗಿ ಐಟಿ ಧಾಳಿ ನಡೆಸುತ್ತಿರುವುದು ಖಂಡನೀಯವಾಗಿದೆ. ಇದು ನಾಚಿಕೆಗೇಡಿನ ವಿಷಯವಾಗಿದ್ದು ದುರುದ್ದೇಶಪೂರ್ವವಾಗಿ ನಡೆಯುತ್ತಿರುವ ಐಟಿ ಧಾಳಿಯನ್ನು ಇಡೀ ನಾಗರಿಕ ಸಮಾಜವೇ ಖಂಡಿಸುತ್ತಿದೆ ಎಂದು ವಿನಯ ಕುಮಾರ್ ಸೊರಕೆ ಆರೋಪಿಸಿದ್ದಾರೆ.
ವಿನಯಕುಮಾರ್ ಸೊರಕೆ ಕರಾವಳಿಯ ಮೀನುಗಾರರ ಧ್ವನಿಯಾಗಿ ವಿಧಾನಸಭೆ ಪ್ರವೇಶಿಸಲಿ ;
ಕೇರಳದ ಸಂಸದ, ಎಐಸಿಸಿ ಮೀನುಗಾರರ ಸಂಘಟನೆಯ ಮಾಜಿ ಅಧ್ಯಕ್ಷ ಟಿ. ಪ್ರತಾಪನ್ ಮಾತನಾಡಿ, ಮೀನುಗಾರರ ಜತೆಗೆ ಹಿಂದುಳಿದ ವರ್ಗಗಳ ಎಲ್ಲ ಸಮುದಾಯದವರೂ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿದ್ದು ಮೀನುಗಾರಿಕಾ ವೃತ್ತಿ ನಡೆಸುತ್ತಿರುವವರನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣವಾಗಿ ನಿರ್ಲಕ್ಷಿಸಿವೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರಕಾರ ರಚಿಸುವುದು ಪಕ್ಕಾ ಆಗಿದ್ದು ಕಾಪುವಿನಲ್ಲಿ ವಿನಯಕುಮಾರ್ ಸೊರಕೆ ಅವರನ್ನು ಗೆಲ್ಲಿಸುವ ಮೂಲಕ ಮೀನುಗಾರರ ಧ್ವನಿಯಾಗಲು ವಿಶೇಷ ಅವಕಾಶ ಒದಗಿಸಿಕೊಡಲು ಪ್ರತೀಯೊಬ್ಬರೂ ಸಹಕರಿಸುವಂತೆ ಅವರು ಮನವಿ ಮಾಡಿದರು.