Advertisement

ನಿಂದಕರಿಗೆ ರಾಹುಲ್ ಗಾಂಧಿ ಧನ್ಯವಾದ

04:15 AM Sep 06, 2019 | mahesh |

ಹೊಸದಿಲ್ಲಿ: ಬೈದವರೆಮ್ಮ ಬಂಧುಗಳೆನ್ನಿ ಎಂಬ ಬಸವಣ್ಣನವರ ಮಾತಿನಂತೆ, ತಮ್ಮ ರಾಜಕೀಯ ವಿರೋಧಿಗಳಿಗೆ ಧನ್ಯವಾದ ಹೇಳುವ ಮೂಲಕ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಶಿಕ್ಷಕರ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ಆದ್ದರಿಂದ ರಾಜಕೀಯದಲ್ಲಿ ನನ್ನನ್ನು ಅಣಕವಾಡಿದವರು, ನನ್ನ ವಿರುದ್ಧ ಅಪಪ್ರಚಾರ ಮಾಡಿದವರೆಲ್ಲರೂ ನನಗೆ ಹೊಸ ಪಾಠಗಳನ್ನು ಕಲಿಸಿದ್ದಾರೆ ಅವರಿಗೆ ಅಭಾರಿ ಎನ್ನುವಂತೆ ಅವರು ಹೇಳಿದ್ದಾರೆ.

Advertisement

ಇವರಲ್ಲಿ, ಸಾಮಾಜಿಕ ಜಾಲತಾಣಗಳ ಟ್ರೋಲ್ ಗುಂಪುಗಳು, ನಿರ್ದಿಷ್ಟ ಪಕ್ಷಕ್ಕೆ ಸೀಮಿತವಾಗಿರುವ ಪತ್ರಕರ್ತರು, ರಾಜಕೀಯ ವಿರೋಧಿಗಳು ಸೇರಿದ್ದಾರೆ. ಹಾಗಾಗಿ, ಶಿಕ್ಷಕರ ದಿನಾಚರಣೆಯಾದ ಇಂದು (ಗುರುವಾರ) ಅವರೆಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಅವರ ಈ ಟ್ವೀಟ್ ವೈರಲ್ ಆಗಿದೆ. ಜತೆಗೆ ನೆಟ್ಟಿಗರ ಟೀಕೆಗೂ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next