Advertisement
ನೋಟು ನಿಷೇಧವಾಗಿ ಇಂದಿಗೆ ಮೂರು ವರ್ಷ ಕಳೆದಿದ್ದು, ಎನ್‌ಡಿಎ ಸರಕಾರದ ಈ ನಡೆ ಭಯೋತ್ಪಾದಕ ದಾಳಿಯಂತಿದೆ ಎಂದು ರಾಹುಲ್ ಅವರು ಟ್ವೀಟ್ ಮಾಡಿದ್ದಾರೆ. ಅವರು ಟ್ವಿಟರ್‌ನಲ್ಲಿ ಹೇಳಿದ್ದಿಷ್ಟು “ನೋಟು ರದ್ದತಿಯಂತಹ ಭಯೋತ್ಪಾದಕ ದಾಳಿ ನಡೆದು ಇಂದಿಗೆ 3 ವರ್ಷ ಕಳೆದಿವೆ. ಇದು ಭಾರತೀಯ ಆರ್ಥಿಕತೆಯನ್ನು ನಾಶಗೊಳಿಸಿದ್ದು, ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಲಕ್ಷಾಂತರ ಸಣ್ಣ ಉದ್ಯಮಿಗಳು ಅಮಾನ್ಯಿàಕರಣದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಸಹಸ್ರಾರು ಭಾರತೀಯರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ’ ಎಂದಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್‌ಗೆ ಕಾಂಗ್ರೆಸ್‌ನ ವರಿಷ್ಠೆ ಪ್ರಿಯಾಂಕಾ ವಾದ್ರಾ ಅವರೂ ಪ್ರತಿಕ್ರಿಯಿಸಿದ್ದು, ನೋಟು ನಿಷೇಧ ದೇಶಕ್ಕೆ ವಿಪತ್ತಾಗಿ ಕಾಡಿದ್ದು, ಇದರ ಜವಾಬ್ದಾರಿಯನ್ನು ಬಿಜೆಪಿ ಸರಕಾರ ಹೊರಲು ಬಯಸುತ್ತದಯೇ ಎಂದು ಪ್ರಶ್ನಿಸಿದ್ದಾರೆ. ನೋಟು ರದ್ದತಿ ನಮ್ಮ ಆರ್ಥಿಕತೆಯನ್ನು ನಾಶಪಡಿಸಿದೆ ಎಂದು ಅವರೂ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.