Advertisement
ತಮ್ಮ ಟ್ವೀಟರ್ ಖಾತೆಯಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ವಲಸಿಗರು ಮತ್ತೊಮ್ಮೆ ವಲಸೆ ಹೋಗುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ಹಾಕುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ”. ಆದರೆ ಸರ್ಕಾರವು ಕೋವಿಡ್ ಹರಡಲು ಜನರನ್ನು ದೂಷಿಸುತ್ತಿರುವ ಕೇಂದ್ರ, ಇಂತಹ ಸಾರ್ವಜನಿಕ ನೆರವು ಕ್ರಮವನ್ನು ತೆಗೆದುಕೊಳ್ಳುತ್ತದೆಯೇ?” ಎಂದು ಅವರು ಕೇಳಿದ್ದಾರೆ.
Related Articles
Advertisement
ಏತನ್ಮಧ್ಯೆ, ರಾಷ್ಟ್ರೀಯ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಭಯಾನಕ ಕೋವಿಡ್ 19 ಪರಿಸ್ಥಿತಿಯನ್ನು ಗಮನಿಸಿದರೆ, ಸರ್ಕಾರವು ಲಾಕ್ ಡೌನ್ ಹೇರುವಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿರುವುದು ಸ್ಪಷ್ಟವಾಗಿದೆ, ಆದರೆ, ವಲಸೆ ಕಾರ್ಮಿಕರು ಮತ್ತೊಮ್ಮೆ ಕಳೆದ ಬಾರಿಯ ಸಮಸ್ಯೆಯನ್ನೇ ಎದುರಿಸಬೇಕಾಗುತ್ತದೆ.
ಇದು ನಿಮ್ಮ ಯೋಜನೆಯೇ ? ನೀತಿಗಳು ಎಲ್ಲರನ್ನೂ ನೋಡಿಕೊಳ್ಳುವಂತಹದ್ದಾಗಿರಬೇಕು. ಬಡವರು, ಕಾರ್ಮಿಕರು ಮತ್ತು ಬೀದಿ ವ್ಯಾಪಾರಿಗಳಿಗೆ ಹಣಕಾಸಿನ ನೆರವು ಅವಶ್ಯಕತೆಯಾಗಿದೆ. ದಯವಿಟ್ಟು ಇದನ್ನು ಮಾಡಿ ”ಎಂದು ಅವರು ಹಿಂದಿಯಲ್ಲಿ ಮಾಡಿದ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇನ್ನು, ದೆಹಲಿ, ಯುಪಿ ಮತ್ತು ಇತರ ರಾಜ್ಯಗಳಲ್ಲಿ ಲಾಕ್ ಡೌನ್ ಘೋಷಣೆಯಾದ ನಂತರ ಸಾಮಾಜಿಕ ಅಂತರಗಳಿಲ್ಲದೆ ವಲಸಿಗರು ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ತಮ್ಮ ಊರಿಗೆ ಮರಳಲು ಕಾದು ನಿಂತಿದ್ದ ಧೃಶ್ಯಗಳು ಕಂಡು ಬಂದವು.
ಕೋವಿಡ್ ಸೋಂಕನ್ನು ನಿಯಂತ್ರಿಸಲು ದೆಹಲಿ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳಲ್ಲಿ ಲಾಕ್ ಡೌನ್ ಮತ್ತು ಕಂಟೈನ್ ಮೆಂಟ್ ವಲಯಗಳಂತಹ ಉಪಕ್ರಮಗಳ ನಿರ್ಬಂಧಗಳನ್ನು ಜಾರಿಗೆ ತಂದಿವೆ.
ಕಳೆದ ವರ್ಷವೂ ಕೂಡ ಲಾಕ್ ಡೌನ್ ನ ಕಾರಣದಿಂದಾಗಿ ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶಗಳಂತಹ ರಾಜ್ಯಗಳಿಂದ ಸಾವಿರಾರು ಮಂದಿ ವಲಸೆ ಕಾರ್ಮಿಕರು ತಮ್ಮ ಊರಿಗೆ ಕಾಲ್ನಡಿಗೆಯಲ್ಲಿ, ಸೈಕಲ್ಲುಗಳಲ್ಲಿ ಸಾವಿರಾರು ಮೈಲಿ ಗುಳೆ ಹೋಗಿದ್ದಕ್ಕೆ ಇಡಿ ದೇಶ ಸಾಕ್ಷಿಯಾಗಿತ್ತು. ಈಗ ಕೆಲವು ರಾಜ್ಯಗಳಲ್ಲಿ ಸೊಂಕಿನ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಕಾರಣ ಅಲ್ಲಿನ ಸರ್ಕಾರ ಲಾಕ್ ಡೌನ್ ಮೊರೆ ಹೋಗಿದ್ದು, ಅಲ್ಲಲ್ಲಿ ವಲಸೆ ಕಾರ್ಮಿಕರು ಗುಳೆ ಹೋಗುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ಓದಿ : ಕೋವಿಡ್ ಹೆಚ್ಚಳ: ಭಾರತ ಪ್ರವಾಸ ಮುಂದೂಡಿ: ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ