Advertisement

ನಂಜನಗೂಡು-ವಯನಾಡ್‌ ರೈಲು ಯೋಜನೆಗೆ ನೆರವು ನೀಡಿ

09:36 AM Dec 05, 2019 | Team Udayavani |

ಹೊಸದಿಲ್ಲಿ: ಕರ್ನಾಟಕದ ನಂಜನಗೂಡು – ವಯನಾಡು-ನಿಲಂಬೂರ್‌ ರೈಲ್ವೇ ಯೋಜನೆ ಕಾಮಗಾರಿ ಹಲವಾರು ವರ್ಷಗಳಿಂದ ಕುಂಟುತ್ತಾ ಸಾಗಿದೆ. ಈ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಲು ಕೇಂದ್ರ ಸರಕಾರ ಕೇರಳಕ್ಕೆ ಸಹಾಯ ಮಾಡಬೇಕು ಎಂದು ವಯನಾಡು ಸಂಸದ ರಾಹುಲ್‌ ಗಾಂಧಿ ಬುಧವಾರ ಲೋಕಸಭೆಯಲ್ಲಿ ಆಗ್ರಹಿಸಿದರು.

Advertisement

ಆ ಭಾಗದಲ್ಲಿ ರೈಲ್ವೇ ಸಂಪರ್ಕ ಏನೇನೂ ಪ್ರಗತಿಯಾಗಿಲ್ಲ. ಬಂಡೀಪುರ ರಾಷ್ಟ್ರೀಯ ಹೆದ್ದಾರಿಯನ್ನು ರಾತ್ರಿ ವೇಳೆ ಮುಚ್ಚಿದ್ದನ್ನು ಪ್ರಸ್ತಾವಿಸಿ, ಜನರಿಗೆ ಸಂಚಾರಕ್ಕೆ ಅನನುಕೂಲವಾಗಿದೆ. ಹೀಗಾಗಿ ಆ ಭಾಗದ ಜನರು ತೀರಾ ಅಗತ್ಯದ ಸಮಯದಲ್ಲೂ ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಹೋಗಲು ಪರದಾಡಬೇಕಾಗುತ್ತದೆ. ಆದರೂ ಈ ಕಾಮಗಾರಿ ಹಲವಾರು ವರ್ಷಗಳಿಂದ ಪ್ರಗತಿ ಕಾಣುತ್ತಿಲ್ಲ ಎಂದರು.

ಈ ರೈಲ್ವೇ ಮಾರ್ಗ ಕಾರ್ಯಾರಂಭ ಮಾಡಿದರೆ ವಯನಾಡಿನಿಂದ ಬೆಂಗಳೂರು ಮತ್ತು ತಿರುವನಂತಪುರಂ ನಡುವಿನ ಪ್ರಯಾಣದ ಅವಧಿ ತಗ್ಗುತ್ತದೆ. ಜತೆಗೆ ವಯನಾಡು ಭಾಗದ ಜನರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ. ಈ ರೈಲ್ವೇ ಮಾರ್ಗ ಆ ಭಾಗದ ಜನರ ಬಹುದಿನಗಳ ಕನಸು. ಆದರೆ ಅದು ಈಡೇರುತ್ತಿಲ್ಲ. ಸಾಮಾಜಿಕ ಮತ್ತು ಆರ್ಥಿಕ ಪ್ರಾಮುಖ್ಯ ಕಾರಣದಿಂದಾಗಿ ಈ ರೈಲ್ವೇ ಮಾರ್ಗ ಅತ್ಯಗತ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next